ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಶಿರಸಿ: ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್

ಶಿರಸಿ: ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್

Thu, 11 Apr 2024 18:42:02  Office Staff   S O News

ಬನವಾಸಿ (ಶಿರಸಿ): ಯಲ್ಲಾಪುರ ಕ್ಷೇತ್ರದ ಯುವ ಮುಖಂಡ ವಿವೇಕ್ ಹೆಬ್ಬಾರ್ ಇಂದು ಅಧಿಕೃತವಾಗಿ  ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಪಟ್ಟಣದ ಟಿ‌.ಎಮ್.ಎಸ್ ಎದುರು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ವಿವೇಕ್ ಹೆಬ್ಬಾರ್ ಅವರಿಗೆ ಪಕ್ಷದ ಶಾಲು ಹಾಕಿ ಬಾವುಟವನ್ನ ನೀಡುವ ಮೂಲಕ ಸೇರ್ಪಡೆ ಮಾಡಿಕೊಂಡಿದ್ದಾರೆ.

ಇದೇ ಸಂಧರ್ಭದಲ್ಲಿ ಬನವಾಸಿ ಭಾಗದ ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಮಂಗಳಾ ನಾಯ್ಕ, ಸಿದ್ದು ನರೇಗಲ್, ರಘು ನಾಯ್ಕ, ಪ್ರಕಾಶ್ ಹೆಗಡೆ, ಗಣಪತಿ ನಾಯ್ಕ ಬಾಶಿ, ಪ್ರಶಾಂತ್ ಗೌಡರ್, ಜಿ.ವಿ ಹೆಗಡೆ, ಸುಭಾಷ್ ಮಡಿವಾಳ, ನಾಗೇಂದ್ರ ಮಡಿವಾಳ, ಸತೀಶ್ ನಾಯ್ಕ, ಸುರೇಶ್ ಗಡಿಗೇರಿ, ಸೇರಿದಂತೆ ಬನವಾಸಿ ಭಾಗದ ಹತ್ತು ಪಂಚಾಯತ್ ಗಳಲ್ಲಿ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ನೂರಾರು ಜನರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಸಿ.ಎಫ್ ನಾಯ್ಕ,  ವೆಂಕಟೇಶ್ ಹೆಗಡೆ ಹೊಸಬಾಳೆ, ಆರ್ ಹೆಚ್ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Share: