ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್

ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್

Sun, 11 Oct 2009 15:16:00  Office Staff   S.O. News Service
ರಿಯಾದ್, ಅಕ್ಟೋಬರ್ 11: ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ಕಾರ್ಯನಿರತವಾಗಿರುವ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ ಸಂಘಟನೆ ಇತ್ತೀಚೆಗೆ ಈದ್ ಮಿಲನ್ ಕಾರ್ಯಕ್ರಮವೊಂದರಲ್ಲಿ ತನ್ನ ಸದಸ್ಯರ ಮಿಲನ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.
11-riy1.jpg
ನಗರದ ಬತ್‍ಹಾದಲ್ಲಿರುವ ಹಾಫ್ ಮೂನ್ ರೆಸ್ಟೊರೆಂಟ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮ ಫಜ್ಲುರ್ ರೆಹಮಾನ್ ಕೋಲ್ಕರ್ ರವರ ಕುರ್ ‍ಆನ್ ಪಠಣದೊಂದಿಗೆ ಪ್ರಾರಂಭವಾಯಿತು.  ಎಂ.ಹೆಚ್. ತಾಹಿರ್ ರವರು ನೆರೆದವರನ್ನು ಸಭೆಗೆ ಸ್ವಾಗತಿಸಿದರು.  
11-riy2.jpg
ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ಹೊರತಾಗಿ ಹಲವು ಆಟೋಟ್ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಆಟಗಳು ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಪ್ರಾಯೋಜಿಸಲಾಗಿದ್ದ ಹಲವು ಬಹುಮಾನಗಳು ಅದೃಷ್ಟಶಾಲಿಗಳಿಗೆ ಒಲಿದವು. 
11-riy4.jpg
ಚಿತ್ರ, ವರದಿ: ಫಜ್ಲುರ್ ರೆಹಮಾನ್, ಪ್ರಧಾನ ಕಾರ್ಯದರ್ಶಿ

Share: