ಶಿರಸಿ : ಅಕ್ರಮವಾಗಿ ಕಾಡುಪ್ರಾಣಿಯನ್ನು ಬೇಟೆಯಾಡಿದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನ ಬಂಧಿಸಿದ ಘಟನೆ ತಾಲೂಕಿನ ದೊಡ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ನೆರಬೈಲ್ ಗ್ರಾಮದ ಮಂಜುನಾಥ ಉಮೇಶ್ ನಾಯ್ಕ ಬಂಧಿತ ವ್ಯಕ್ತಿ. ಕಾಡು ಕುರಿ ಬೇಟೆಯಾಡಿ ಮಾಂಸ ತೆಗೆಯುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ಬಂಧಿಸಿದ್ದಾರೆ.
ಬಂಧಿತನಿಂದ ಬಂದೂಕು ವಶಪಡಿಸಿಕೊಳ್ಳಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಇವರ ಮಾರ್ಗದರ್ಶನ ಹಾಗು ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಎಸ್ ಎಸ್ ನಿಂಗಾಣಿ ಇವರ ನೇತ್ರತ್ವದಲ್ಲಿ ವಲಯ ಅರಣ್ಯಾದಿಕಾರಿ ಗಿರೀಶ ಎಲ್ ನಾಯ್ಕ ಉಪ ವಲಯ ಅರಣ್ಯ ಅಧಿಕಾರಿ ಧ್ರುವ ಕುಮಾರ ದಾಳಿ ನಡೆಸಿದ್ದರು. ತನಿಖೆ ಮುಂದುವರಿದಿದೆ .