ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪ್ರವಾದಿಯವರ ಸಂದೇಶ ಪ್ರಸರಣ ಉದ್ದೇಶದಲ್ಲಿ ಸರ್ವಸ್ವ ತ್ಯಾಗಕ್ಕೂ ಸಿದ್ಧರಿರಬೇಕು - ಮೌಲಾನಾ ಸೈಯದ್ ಸಲ್ಮಾನ್ ನದ್ವಿ

ಭಟ್ಕಳ: ಪ್ರವಾದಿಯವರ ಸಂದೇಶ ಪ್ರಸರಣ ಉದ್ದೇಶದಲ್ಲಿ ಸರ್ವಸ್ವ ತ್ಯಾಗಕ್ಕೂ ಸಿದ್ಧರಿರಬೇಕು - ಮೌಲಾನಾ ಸೈಯದ್ ಸಲ್ಮಾನ್ ನದ್ವಿ

Sun, 03 Jan 2010 02:22:00  Office Staff   S.O. News Service
ಭಟ್ಕಳ:೨, ಯುವ ಸಮುದಾಯವು ಪ್ರವಾದಿ ಮುಹಮ್ಮದ್(ಸ)ರ ಸಂದೇಶವನ್ನು ಪ್ರಚಾರ ಮಾಡಲು ತಮ್ಮೆಲ್ಲಾ ಸರ್ವಸ್ವವನ್ನು ತ್ಯಾಗ ಮಾಡಬೇಕಾಗಿ ಬಂದರೂ ಅದಕ್ಕೂ ಸಿದ್ದರಿರಬೇಕು ಎಂದು ಅಖಿಲ ಭಾರತ ಜಮಿಯತುಲ್ ಶಬ್ಬಾಬ್ ನ ಅಧ್ಯಕ್ಷ ಹಾಗೂ ನದ್ವತುಲ ಉಲೇಮಾ ಲಖ್ನೋದ  ಪ್ರಾದ್ಯಾಪಕ  ಕರೆ ನೀಡಿದರು ಅವರು ನಗರದ ವೈ.ಎಮ್.ಎಸ್.ಎ ಮೈದಾನದಲ್ಲಿ ಶುಕ್ರವಾರದಂದು ಯಂಗ್ ಮುಸ್ಲಿಮ್ ಸರ್ವಿಸ್ ಅಸೋಸಿಯೇಶನ್ ಅಯೋಜಿಸಿದ್ದ ರಾಷ್ಟ್ರ ಮಟ್ಟದ ನಾ‌ಅತ್ ಸ್ಪರ್ಧೆ ಮತ್ತು ಕುರಾನ್ ಕಂಠಪಾಠ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. 
 
ಕೆಡುಕು ಮತ್ತು ವ್ಯಭಿಚಾರದ ಸುಳಿಯಲ್ಲಿ ಇಂದಿನ ಸಮಾಜ ನಲುಗುತ್ತಿದೆ.ಇದರಿಂದ ಹೊರಬರಲು ಆಗದೆ ಅಲ್ಲಿಯೆ ತಮ್ಮ ಜೀವನವನ್ನು ಕಳಯುತ್ತಿರುವವರಿಗೆ ಪ್ರವಾದಿ ಮುಹಮ್ಮದ್ (ಸ)ರ ಸಂದೇಶವೊಂದೆ ಬೆಳಕು ನೀಡಲು ಸಾದ್ಯ. ಆದ್ದರಿಂದ ಅವರ ಸಂದೇಶವನ್ನು ಪ್ರಚಾರ ಮಾಡಲು ಯುವ ಸಮುದಾಯವು ಕಟಿಬದ್ಧರಾಗಬೇಕು ಎಂದರು. ಯುರೋಪ್ ಯಾ ಅಮೇರಿಕಾ ಜಗತ್ತಿನ ಮೂಲೆ ಮೂಲೆಗಳಲ್ಲಿ ಇಂದು ಇಸ್ಲಾಮಿನ ಶತೃಗಳು ಇಸ್ಲಾಮ್ ಮತ್ತು ಇಸ್ಲಾಮಿ ಷರಿಯತ್ ಗೆ ವಿರುದ್ದವಾಗಿ ಕುಪ್ರಚಾರದಲ್ಲಿ ತೊಡಗಿವೆ. ಅವರಿಗೆ ಸಮರ್ಪಕವಾದ ಉತ್ತರವನ್ನು ನೀಡಲು ಮುಸ್ಲಿಮ್ ಸಮುದಾಯದ ಸನ್ನದ್ದರಾಗಬೇಕಿದೆ ಎಂದರು. ಕೇವಲ ಪ್ರವಾದಿ ಮುಹಮ್ಮದ್ ರ ಕುರಿತು ನಾ‌ಅತ್ ಸ್ಪರ್ಧೆ ಅಥವಾ ಅವರ ಬದುಕಿನ ಕುರಿತ ಭಾಷಣವನ್ನು ಮಾಡಿದರೆ ಸಾಲದು ಅವರ ಸಂಪೂರ್ಣವಾದ ಜೀವನವನ್ನು ಅರಿತು ಅದರಂತೆ ನಡೆಯಬೇಕಾದ ಅವಶ್ಯಕತೆಯಿದೆ ಎಂದ ಅವರು ಇದಕ್ಕಾಗಿ ಮುಸ್ಲಿಮ್ ಸಮುದಾಯ ಸಂಪೂರ್ಣವಾಗಿ ಸಿದ್ದಗೊಳ್ಳಬೇಕಿದೆ ಎಂದರು. 
ಈ ಸಂದರ್ಭದಲ್ಲಿ ಮೌಲಾನ ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲ್ಯಾಸ ನದ್ವಿ ಮತ್ತಿತರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಇಖ್ಬಾಲ್ ಸುಹೇಲ್ ವಹಿಸಿದ್ದರು.  
 
ಕಾರ್ಯಕ್ರಮವು ಹಾಫಿಝ್ ಮುಹಮ್ಮದ್ ತಾರಿಖ್ ಅಕ್ರಮಿ ಯ ಕುರ್‌ಅನ್ ಪಠನದೊಂದಿಗೆ ಆರಂಭವಾಯಿತು. ವೈ‌ಎಮ್‌ಎಸ್‌ಎ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲಾನ ಇಮ್ರಾನ್ ಅಕ್ರಮಿ ನದ್ವಿ ಸಂಘಟನೆಯ ಧೇಯೋದೇಶವನ್ನು ಪರಿಚಯಿಸಿದರು. ಅಬ್ದುಲ್ ರಖೀಬ್ ಎಮ್.ಜೆ. ಅತಿಥಿಗಳನ್ನು ಪರಿಚಯಿಸಿದರು. 
 
ವೇದಿಕೆಯಲ್ಲಿ ಮೌಲಾನ ಐಯ್ಯೋಬ್ ನದ್ವಿ, ಮೌಲಾನ ಅಬ್ದುಲ್ ಬಾರಿ ನದ್ವಿ, ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ, ಸೈಯ್ಯದ್ ಹಸನ್ ಸಖ್ಖಾಫ್, ಅಂಜುiನ್ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್.ಶಬ್ಬರ್, ಜಮಾತುಲ್ ಮುಸ್ಲಿಮೀನ್ ಖಾಝಿ ಮುಲ್ಲಾ ಇಖ್ಬಾಲ್ ನದ್ವಿ, ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ, ಮೌಲಾನ ಶಫಿ ಎಸ್.ಪಿ, ಮತ್ತು ಹಸನ್ ಬಾಪ ಸಾದಾ ಉಪಸ್ಥಿತರಿದ್ದರು.
 
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ 

Share: