ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಉಡುಪಿಯಿಂದ ಬಾದಾಮಿಗೆ ತೆರಳುತ್ತಿರುವ ಬೃಹದೃಥಕ್ಕೆ ಅದ್ದೂರಿ ಸ್ವಾಗತ

ಭಟ್ಕಳ: ಉಡುಪಿಯಿಂದ ಬಾದಾಮಿಗೆ ತೆರಳುತ್ತಿರುವ ಬೃಹದೃಥಕ್ಕೆ ಅದ್ದೂರಿ ಸ್ವಾಗತ

Wed, 03 Mar 2010 17:14:00  Office Staff   S.O. News Service

ಭಟ್ಕಳ, ಮಾರ್ಚ್ 3; ೩ ಉಡುಪಿಯಿಂದ ಬಾದಾಮಿಯ ಕೊಟ್ಟೂರು ಶಿವಯೋಗಿ ಸಂಗನಮಠಕ್ಕೆ ತೆರಳುವ ಬೃಹಧೃಥಕ್ಕೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

 

ಜಗತ್ತಿನಲ್ಲೇ ಅತಿದೊಡ್ಡದಾದ ಈ ರಥವನ್ನು ಉಡುಪಿಯ ಪೆರ್ಡೂರಿನಲ್ಲಿ ನಿರ್ಮಿಸಲಾಗಿದೆ. ಈ ರಥ ೬೫ ಅಡಿ ಎತ್ತರ ಹೊಂದಿದ್ದು, ತಳಭಾಗದಲ್ಲಿ ೨೩ ಅಡಿ ಅಗಲವನ್ನು ಹೊಂದಿದೆ. ಇದರಲ್ಲಿ ಚಾಲುಕ್ಯ, ಹೊಯ್ಸಳ,ಕದಂಬರ ಶಿಲ್ಪಕಲೆಗಳು ಅಳವಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕವಾಗಿ ಹೊಸ ಶಿಲ್ಪ ಕಲೆಗಳನ್ನು ಕೆತ್ತಲಾಗಿದೆ. ಸಂಪೂರ್ಣ ಮರಗಳಿಂದಲೇ ತಯಾರಿಸಲಾಗಿರುವ ರಥಕ್ಕೆ ವಿವಿಧ ಜಾತಿಯ ಐದು ಸಾವಿರಕ್ಕೂ ಅಧಿಕ ಶೇಪ್ಟಿ ಮರದ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಈ ರಥ ನಿರ್ಮಾಣಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚ ತಗುಲಿದ್ದು, ಐದು ತಿಂಗಳಲ್ಲೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಶಿವಯೋಗಿ ಸಂಗನಮಠದಲ್ಲಿ ಎಪ್ರಿಲ್ ೮ ರಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಈ ಬೃಹಧೃಥ ಸಮರ್ಪಣೆಯಾಗಲಿದೆ. ಬಾದಾಮಿಗೆ ತೆರಳುವ ರಥಕ್ಕೆ ಹಾಗೂ ಅದನ್ನು ನಿರ್ಮಿಸುವ ಜವಾಬ್ದಾರಿ ಹೊತ್ತ ಉಡುಪಿಯ ರಾಜಶೇಖರ ಹೆಬ್ಬಾರ ಹಾಗೂ ಅವರ ತಂಡಕ್ಕೆ ಭಟ್ಕಳದಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಹೆಬ್ಬಾರ, ಸುರೇಂದ್ರ ಕಾಮತ್, ನಾಗೇಶ ಪೈ, ಜಗಧೀಶ ಹೆಬ್ಬಾರ,ಶಿವಾನಂದ ಹೆಬ್ಬಾರ ಸೇರಿದಂತೆ ಹಲವು ಮಂದಿ ಪಾಲ್ಗೊಂಡು ಬೃಹಧೃಥವನ್ನು ವೀಕ್ಷಿಸಿದರು. ಸಿ ಪಿ‌ಐ ಗುರುಮಾಥೂರು ಮತ್ತು ಸಿಬ್ಬಂದಿಗಳು ಸೂಕ್ತ ಬಂದೋಬಸ್ತ ಏರ್ಪಡಿಸಿದ್ದರು.


Share: