ಕಾರವಾರ,೨೮- ಎರಡನೇ ಹಂತದ ಗ್ರಾ.ಪಂ. ಚುನಾವಣೆ ನಡೆಯಲಿರುವ ಉ.ಕ. ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಲು ಕೊನೇ ದಿನವಾದ ಬುಧವಾರ ನಾಮಪತ್ರಗಳ ಮಹಾಪೂರವೇ ಹರಿದಿದೆ.
ನಾಮಪತ್ರ ಸಲ್ಲಿಸಲು ಕೊನೆಯ ಗಡುವಾದ ೩ ಗಂಟೆಯವರೆಗೂ ಅಭ್ಯರ್ಥಿಗಳು ಪಂಚಾಯತ ಕಚೇರಿಗೆ ಆಗಮಿಸುತ್ತಲೇ ಇದ್ದುದರಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ವಿಳಂಬಗೊಂಡಿದೆ. ಪ್ರತಿ ಪಂಚಾಯತನಿಂದ ತಾಲೂಕು ಕೇಂದ್ರಕ್ಕೆ ರಾತ್ರಿವರೆಗೆ ಮಾಹಿತಿ ಬಂದಿರಲಿಲ್ಲ. ರಾತ್ರಿ ೧೦ ಗಂಟೆಯ ಸುಮಾರಿಗೆ ಕುಮಟಾ, ಹೊನ್ನಾವರ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕಿನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ವಿವರ ಲಭಿಸಿದೆ.
ಲಭ್ಯ ಮಾಹಿತಿಯಂತೆ ಕಾರವಾರ ತಾಲೂಕಿನಲ್ಲಿ ೬೫೦ ಅಭ್ಯರ್ಥಿಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದರೆ, ಅಂಕೋಲಾದಲ್ಲಿ ೧೯೨೫, ಭಟ್ಕಳ ೧೦೦೪, ಶಿರಸಿ ೧೨೪೨, ಸಿದ್ದಾಪುರ ೧೦೬೯, ಯಲ್ಲಾಪುರ ೫೨೮, ಮುಂಡಗೋಡ ೮೦೨, ಹಳಿಯಾಳ ೯೭೭ ಮತ್ತು ಜೋಯಿಡಾದಲ್ಲಿ ೬೨೭ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಕುಮಟಾದಲ್ಲಿ ಗೋಕರ್ಣ ಪಂಚಾಯತನ ಇಂದಿನ ಅಭ್ಯರ್ಥಿಗಳ ಸಂಖ್ಯೆ ಹೊರತುಪಡಿಸಿ ೧೧೬೬ ಅಭ್ಯರ್ಥಿಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.