ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಅ೦ಕೋಲ: ಕಡಲ ಕಿನಾರೆಯಲ್ಲಿ ವಿದೇಶಿ ಪ್ರವಾಸಿಗರ ಅರೆಬೆತ್ತಲೆ ಸ೦ಚಾರ : ಅದು ಭಾರತದ ಸ೦ಸ್ಕ್ರತಿಯ ಜೊತೆಗೆ ಅವರಿಗೂ ಕೂಡ ಮಾರಕ

ಅ೦ಕೋಲ: ಕಡಲ ಕಿನಾರೆಯಲ್ಲಿ ವಿದೇಶಿ ಪ್ರವಾಸಿಗರ ಅರೆಬೆತ್ತಲೆ ಸ೦ಚಾರ : ಅದು ಭಾರತದ ಸ೦ಸ್ಕ್ರತಿಯ ಜೊತೆಗೆ ಅವರಿಗೂ ಕೂಡ ಮಾರಕ

Thu, 29 Apr 2010 06:37:00  Office Staff   S.O. News Service
ಅಂಕೋಲಾ: ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ದೇಶದ ನಾನಾ ಭಾಗದ ಕಡಲ ಕಿನಾರೆಗಳಲ್ಲಿ ಕಂಡುಬರುತ್ತಾರೆ. ಆದರೆ ಅವರು ಅರೆಬೆತ್ತಲೆಯ ಸಂಚಾರ, ಸಮುದ್ರ ಕಿನಾರೆಯಲ್ಲಿ ಇನ್ನೂ ಅಶ್ಲೀಲವಾಗಿ ತಮ್ಮ ಉಡುಗೆಯನ್ನು ತೊಡುವುದರಿಂದ ಅದು ಭಾರತದ ಸಂಸ್ಕೃತಿಗೆ ಮಾರಕವಾಗುವುದರ ಜೊತೆಗೆ ಅವರಿಗೂ ಕೂಡ ಮಾರಕವೆನಿಸತೊಡಗಿದೆ. ವಿದೇಶಿ ಪ್ರವಾಸಿಗರು ಅರಬೆತ್ತಲೆಯಾಗಿರುವುದರಿಂದ ಇತರರಲ್ಲಿ ಲೈಂಗಿಕ ಭಾವನೆ ಕೆರಳಲು ಪ್ರಮುಖ ಕಾರಣವೆನ್ನಲಾಗಿದ್ದು, ದೇಶದಾದ್ಯಂತ ಇಂತಹ ವಿದೇಶಿ ಮಹಿಳೆಯರ ಮೇಲೆ ಅಲ್ಲಲ್ಲಿ ಅತ್ಯಾಚಾರ ಪ್ರಕರಣಗಳನ್ನು ಕಾಣುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರಿಗೆ ವಸ್ತ್ರಸಂಹಿತೆ ನಿಗದಿಪಡಿಸಲು ಕೇಂದ್ರ ಸರಕಾರ ಚಿಂತಿ ಸಿದ್ದು, ಪ್ರಮುಖ ಬೀಚ್‌ಗಳಿಗೆ ಕೇಂದ್ರ ತಂಡದವರು ಭೇಟಿ ನೀಡುತ್ತಿದ್ದಾರೆ. ವಿಶ್ವವಿಖ್ಯಾತಿ ಗೋಕರ್ಣದ ಓಂ ಬೀಚ್, ಕುಡ್ಲೆ ಬೀಚ್, ಪ್ಯಾರಡೈಸ್ ಬೀಚ್, ಅಂಕೋಲಾದ ಹೊನ್ನೆಬೈಲ್ ಬೀಚ್ ಮೊದಲಾದ ಪ್ರಮುಖ ಬೀಚ್‌ಗಳಿಗೆ ಕೇಂದ್ರ ವಿದೇಶಿ ಪ್ರವಾಸಿ ರಕ್ಷಣಾ ದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪಕ್ಕದ ಗೋವಾ ರಾಜ್ಯವೂ ಕೂಡ ಪ್ರಮುಖ ಬೀಚ್‌ಗಳನ್ನು ಹೊಂದಿರುವುದರಿಂದಾಗಿ ಅಲ್ಲಿ ವಿದೇ ಶಿಗರ ಸಂಖ್ಯೆಯು ಕೂಡ ಅಧಿಕವಾಗಿದೆ. ಆ ಪ್ರಮುಖ ಬೀಚ್‌ಗಳಲ್ಲಿಯೂ ಕೂಡ ವಿದೇಶಿಗರ ಅರೆಬೆತ್ತಲೆ ತಿರುಗಾಟದಿಂದ ಅನಾಹುತಗಳಿಗೆ ದಾರಿ ಮಾಡಿದಂತಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ವಿದೇಶಿ ಪ್ರವಾಸಿಗರಿಗೆ ವಸ್ತ್ರಸಂಹಿತೆ ಖಡ್ಡಾಯಗೊಳಿಸಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವಸ್ತ್ರಸಂಹಿತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ರಾಜ್ಯದ ಪ್ರಮುಖ ಬೀಚ್‌ಗಳಿಗೆ ಕೇಂದ್ರ ತಂಡ ಭೇಟಿ ನೀಡುತ್ತಿದೆ. ಗೋಕರ್ಣದ ಓಂ ಬೀಚ್ ಸೇರಿದಂತೆ ವಿವಿಧ ತಾಣಗಳಲ್ಲಿ ವಿದೇಶಿಗರು ಅರೆಬೆತ್ತಲೆಯಿಂದ ಸ್ವಚ್ಚಂದ ಹಕ್ಕಿಗಳಂತೆ ಸಂಚರಿಸುತ್ತ ತಮ್ಮದೇ ಲೋಕದಲ್ಲಿ ವಿರಮಿಸುತ್ತಿರುತ್ತಾರೆ. ಮುಂಜಾನೆ ಮತ್ತು ಸಂಜೆಯ ಸಂದರ್ಭದಲ್ಲಿ ಅರೆನಗ್ನವಾಗಿ ಸಮುದ್ರ ತೀರದುದ್ದಕ್ಕೂ ಮಲಗಿಕೊಂಡಿರುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಇತರ ಸ್ಥಳಗಳಲ್ಲಿ ಸಂಚರಿಸುವಾಗಲೂ ಕೂಡ ತಮ್ಮ ಅರೆ ನಗ್ನ ದೇಹವನ್ನು ಪ್ರದರ್ಶಿಸುತ್ತಾರೆ. -ಅತ್ಯಾಚಾರ ಪ್ರಕರಣ : ಕಳೆದ ವರ್ಷ ಗೋಕರ್ಣದ ಪ್ಯಾರಡೈಸ್ ಬೀಚ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆ ಲಾರೆನ್ ಗಿಬ್ಸ್ ಜೇನ್ ಮೇಲೆ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಗುಡಿಸಲೊಂದರಲ್ಲಿ ಅತ್ಯಾಚಾರವೆಸಗಿದ್ದ. ಕಳೆದ ವರ್ಷ ಗೋವಾದ ಬೀಚೊಂದರಲ್ಲಿ ಫ್ರಾನ್ಸ್ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ೨೦೦೪ರಲ್ಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಬಳಿ ಡಾನ್ ಎಮಿಲಿ ಗ್ರಿಗ್ಸ್ ಎಂಬ ಪ್ರವಾಸಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ೨೦೦೫ಮೇ ತಿಂಗಳಲ್ಲಿ ರಾಜಸ್ಥಾನದ ಆಳ್ವಾರ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮಗನಿಂದ ಮತ್ತೊಬ್ಬ ಜರ್ಮನ್ ಪ್ರವಾಸಿ ಅತ್ಯಾಚಾರಕ್ಕೊಳ ಗಾದಳು. ಪೋರ್ಟ್ ಕೊಚ್ಚಿ ಬಳಿ ಅಪ್ರಾಪ್ತ ವಯಸ್ಸಿನ ಸ್ವಿಡಿಷ್ ಬಾಲಕಿಯ ಮೇಲೆ ಅತ್ಯಾಚಾರ. ೨೦೦೬ ಮಾರ್ಚ್ ನಲ್ಲಿ ರಾಜಸ್ಥಾನದ ಜುಂಜುನುವಿನ ಶಿಕ್ಷಕನೊಬ್ಬ ಜರ್ಮನ್ ಪ್ರವಾಸಿಯ ಮೇಲೆ ಅತ್ಯಾಚಾರ ನಡೆಸಿದ್ದ. ೨೦೦೭ರ ಸೆಪ್ಟೆಂಬರ ೧೯ರಂದು ಇಬ್ಬರು ಜಪಾನಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾ ಚಾರ. ಇದಾದ ಅನಂತರ ರಾಜಸ್ಥಾನದ ಪುಷ್ಕರ್‌ನಲ್ಲಿ ವಿದೇಶಿಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ ಹೀಗೆ ಅತ್ಯಾಚಾರಗಳ ಸರಮಾಲೆಯೇ ದೇಶಾದ್ಯಂತ ಹರಡಿಕೊಳ್ಳುತ್ತದೆ. ವಿದೇಶಿಗರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಅವರ ತುಂಡುಡುಗೆಯೇ ಮುಖ್ಯ ಕಾರಣವೆನ್ನ ಲಾಗುತ್ತಿದ್ದು, ಲೈಂಗಿಕ ಭಾವನೆಗೆ ಪ್ರಚೋದನೆ ಒದಗಿಸುತ್ತದೆ ಎನ್ನುವುದು ಕೂಡ ತಜ್ಞರ ವಾದವಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದೇಶಿ ಪ್ರವಾಸಿಗರ ಮೇಲೆ ವಸ್ತ್ರಸಂಹಿತೆ ಕಡ್ಡಾಯ ಗೊಳಿಸಲು ಹೊರಟಿರುವುದು ನಮ್ಮ ಸಂಸ್ಕೃತಿಗೆ ಮತ್ತು ವಿದೇಶಿಗರಿಗೂ ಸಹಕಾರಿಯಾಗಲಿದೆ. ಹೀಗಾಗಿ ಇಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೊಳಿಸುವಂತಾಗಬೇಕು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಸೌಜನ್ಯ: ಉದಯವಾಣಿ

Share: