ಭಟ್ಕಳ:೧೦, ರಾಜ್ಯದಲ್ಲಿ ಇತ್ತಿಚೆಗೆ ಅಲ್ಪಸಂಖ್ಯಾತರ ದಾರ್ಮಿಕ ಕೇಂದ್ರಗಳ ಮೇಲಾದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಾಪ್ಯುಲರ್ ಫ್ರಂಟ್ ಆಫ ಇಂಡಿಯಾದ ಭಟ್ಕಳ ಘಟಕವು ದುಷ್ಕರ್ಮಿಗಳು ಇಲ್ಲಿನ ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರ, ಅವರ ಆಸ್ತಿ ಪಾಸ್ತಿಯನ್ನು ಹಾನಿ ಮಾಡುವ ಉದ್ದೇಶದಿಂದಲೆ ಇಂತಹ ಸೌಹಾರ್ಧವನ್ನು ಕೆಡಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ, ಇಂತಹ ದುಷ್ಕರ್ಮಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಸಂಘಟನೆಯ ತಾಲೂಕಾ ಅಧ್ಯಕ್ಷ ಅಮ್ಜದ್ ಶಿರಾಲಿ ನ್ಯಾ. ಸೋಮಶೇಖರ್ ಆಯೋಗವು ಬೊಟ್ಟುಮಾಡಿರುವ ಸಂಘಪರಿವಾರದೊಂದಿಗೆ ಸಂಬಂಧವಿರುವ ಆರೋಪಿಗಳ ವಿರುದ್ಧ ಕೂಡಲೆ ಕಠಿನ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.