ಬೆಂಗಳೂರು, ಫೆ, ೨೫: ನಕಲಿ ದಾಖಲಾತಿ ತಯಾರಿಸಿ ವಿವಿಧ ಬ್ಯಾಂಕ್‌ಗಳಿಗೆ ವಂಚನೆಮಾಡುತ್ತಿದ್ದ ೬ ಮಂದಿ ವಂಚಕರನ್ನು ಮಲ್ಲೇಶ್ವರಂ ಪೊಲೀಸರು ಬಂದಿಸಿದ್ದಾರೆ.
ಮೈಸೂರು ವಿಶ್ವೇಶ್ವರಯ್ಯ ನಗರದ ಮಹೇಂದ್ರ ಕುಮಾರ್, ಮಂಡ್ಯದ ಧನಂಜಯ್ಯ, ಎನ್,ಆರ್. ಮೋಹಲ್ಲಾದ ಅಜಯ್, ರಾಮಾಂಜಯ್ಯ, ಶಿವಾನಂದ ನಗರದ ರಮೇಶ್, ಹೈದರಾಬಾದ್ ಶ್ರೀಧರ ಬಂದಿತರು.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಬ್ಯಾಂಕ್‌ಗಳಲ್ಲಿ ಬಿಎಸ್‌ಎನ್‌ಎಲ್ ಸೇರಿದಂತೆ ಸಹಕಾರ ಸಂಘ ಸಂಸ್ಥೆಗಳಲ್ಲಿಯೂ ಸಹ ವಂಚಿಸಿ ಲಕ್ಷಾಂತರ ಮೌಲ್ಯದ ಹಣ ವಹಿವಾಟು ನಡೆಸಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ವಂಚನೆಗೆ ಸಂಬಂಧಿಸಿದಂತೆ ನಕಲಿ ದಾಖಲು ಬಳಸಿರುವ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎ.ಸಿ.ಪಿ ಜಿ.ಟಿ. ಅಜ್ಜಪ್ಪ ಹೇಳಿದ್ದಾರೆ.