ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬಿಬಿಎಂಪಿ ಚುನಾವಣೆ - ಪರೀಕ್ಷಾ ಸಮಯದಲ್ಲಿ ಚುನಾವಣೆ ನಡೆಸದಿರಲು ನೀಡಿದ ಮನವಿಗೆ ಸುಪ್ರೀಂ ಕೋರ್ಟ್ ಸಹಮತ

ಬೆಂಗಳೂರು: ಬಿಬಿಎಂಪಿ ಚುನಾವಣೆ - ಪರೀಕ್ಷಾ ಸಮಯದಲ್ಲಿ ಚುನಾವಣೆ ನಡೆಸದಿರಲು ನೀಡಿದ ಮನವಿಗೆ ಸುಪ್ರೀಂ ಕೋರ್ಟ್ ಸಹಮತ

Tue, 23 Feb 2010 03:13:00  Office Staff   S.O. News Service

ಬೆಂಗಳೂರು, ಫೆಬ್ರವರಿ 22:ಬಿಬಿ‌ಎಂಪಿ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ವಿಶೇಷ ಮೇಲ್ಮನವಿಯನ್ನು ತಿರಸ್ಕರಿಸಿಲ್ಲ. ನ್ಯಾಯಾಲಯ ರಾಜ್ಯ ಹೈಕೋರ್ಟ್ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ ಈ ಸಂಬಂಧ ರಾಜ್ಯ ಸರ್ಕಾರ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.

 

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಶಾಲಾಕಾಲೇಜುಗಳ ಪರೀಕ್ಷೆ ನಡೆಯಲಿದರುವುದರಿಂದ ಚುನಾವಣೆಗಳನ್ನು ಮುಂದೂಡಬೇಕೆಂದು ಮನವಿಗೆ ತಾತ್ವಿಕ ನ್ಯಾಯ ದೊರೆತಿದೆ.

 

ಶಾಲಾ ಮಕ್ಕಳ ಭವಿಷ್ಯ ಮುಖ್ಯವಾಗಿದ್ದು, ಇದನ್ನು ಗೌರವಾನ್ವಿತ ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಒತ್ತಾಯ ಮಾಡಲಾಗುವುದು ಎಂದರು. ನ್ಯಾಯಾಲಯ ನೀಡಿರುವ ಆದೇಶವನ್ನು ರಾಜ್ಯಸರ್ಕಾರ ಪಾಲಿಸುತ್ತದೆ ಎಂದು ಅಶೋಕ್ ಸ್ವಷ್ಟಪಡಿಸಿದರು. 

 


Share: