ಮಂಗಳೂರು, ಜ.22 : ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಮಾಧ್ಯಮ ಕ್ಷೇತ್ರದಲ್ಲಿ ದುಡಿ ಯುವ ಪತ್ರಕರ್ತರು ಪಕ್ಷಪಾತಿಗ ಳಾಗುವ ಬದಲು ಜವಾಬ್ದಾರಿ ಯಿಂದ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲಿ ಎಂದು ಅಂಕಣಕಾರ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ ಅಭಿಪ್ರಾಯಪಟ್ಟರು.
ಮುಸ್ಲಿಮ್ ಲೇಖಕರ ಸಂಘ ನಗರದ ಪುರಭವನದಲ್ಲಿ ಶುಕ್ರ ವಾರ ಸಂಜೆ ಆಯೋಜಿಸಿದ್ದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ವಿಚಾರಗೋಷ್ಠಿ ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾಧ್ಯಮಗಳು ವೈಜ್ಞಾನಿಕ ಮನೋಭಾವ ಬೆಳೆಸುವ ಸುದ್ದಿಗಳನ್ನು ಬಿತ್ತರಣೆ ಮಾಡುವ ಬದಲು ಮೂಢನಂಬಿಕೆಗೆ ಹೆಚ್ಚು ಒತ್ತು ನೀಡುತ್ತದೆ. ಇದರಿಂದ ಸಮಾಜದಲ್ಲಿ ಅಸಮತೋಲನ ಹೆಚ್ಚುತ್ತದೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಪತ್ರಕರ್ತರು ಕೇವಲ ವರದಿ ಮಾತ್ರ ಮಾಡಿ ಸುಮ್ಮನಿದ್ದರೆ ಸಾಲದು. ಸಮಾಜದಲ್ಲಿ ತಮಗಿರುವ ವಿಶೇಷ ಜವಾಬ್ದಾರಿಯನ್ನು ನಿರ್ವಹಿ ಸಬೇಕು. ಅದು ಸತ್ಯ, ನ್ಯಾಯ ಮತ್ತು ಜಾತ್ಯತೀತದ ಪರ ಹಾಗೂ ದೀನ ದಲಿತರಿಗೆ ಧ್ವನಿಯಾಗಿರಲಿ ಎಂದು ಶಿವಸುಂದರ್ ನುಡಿದರು.
ಮಾಧ್ಯಮ ದವರು ವ್ಯಕ್ತಿ ಅಥವಾ ಧರ್ಮಕ್ಕೆ ಹೆಚ್ಚು ಮಹತ್ವ ನೀಡದೆ ಸತ್ಯ, ಮೌಲ್ಯಕ್ಕೆ ಆದ್ಯತೆ ನೀಡಬೇಕು ಎಂದರು.ಪತ್ರಕರ್ತ ಏ.ಕೆ.ಕುಕ್ಕಿಲ ‘ಸಾಮಾಜಿಕ ಸಂಘರ್ಷ ಮತ್ತು ಮಾಧ್ಯಮಗಳು’ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದರು.
‘ಭಾರತ ಸ್ವಾತಂತ್ರ ಚಳವಳಿ ಮತ್ತು ಮುಸ್ಲಿಮರು’ ಕೃತಿಯ ಲೇಖಕ ಬೆಂಗಳೂರಿನ ಕೆ.ಎಸ್. ಆಸಿಫ್ ಅಲಿ ಎಂಜಿನಿಯರ್‌ರಿಗೆ ದಿ. ಯು.ಟಿ. ಫರೀದ್ ಸ್ಮರಣಾರ್ಥ ಶಾಸಕ ಯು.ಟಿ. ಖಾದರ್ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು.

ವೇದಿಕೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್‌ಮಾನ್, ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಸಈದ್ ಇಸ್ಮಾಯೀಲ್ ಉಪಸ್ಥಿತರಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಮಾಸ್ಟರ್ ಬಿಲಾಲ್ ರಈಫ್ ಕಿರಾಅತ್ ಪಠಿಸಿದರು. ಹುಸೇನ್ ಕಾಟಿಪಳ್ಳ ಸ್ವಾಗತಿಸಿದರು. ಅಹ್ಮದ್ ಅನ್ವರ್ ವಂದಿಸಿದರು. ಶಿಕ್ಷಕ ಅಬ್ದುರ್ರಝಾಕ್ ಅನಂತಾಡಿ ಕಾರ್ಯಕ್ರಮ ನಿರ್ವಹಿಸಿದರು