ಭಟ್ಕಳ,ಡಿಸೆಂಬರ್ 26: ಇಲ್ಲಿನ ಡೋಂಗರ್ ಪಳ್ಳಿಯ ಮೂನ್ ಸ್ಟಾರ್ ಸ್ಪೋರ್ಟ್ಸ ಕ್ಲಬ್ ಆಯೋಜಿಸಿದ ಮೂರು ದಿನಗಳ ತಾಲೂಕಾ ಮಟ್ಟದ ಕಬ್ಬಡಿ ಪಂದ್ಯಾವಳಿಯು ಶನಿವಾರ ಸಂಜೆ ಮುಕ್ತಾಯಗೊಂಡಿತು. ಇಂದು ಸಂಜೆ ನಡೆದ ಅಚಿತಿಮಾ ಪಂದ್ಯಾಟದಲ್ಲಿ ಪರಶುರಾಮ ಸ್ಪೋರ್ಟ್ಸ ಕ್ಲಬ್ ಮತ್ತು ಕಟ್ಟೆವೀರ ತಂಡದ ನಡುವೆ ನಡೆದ ರೋಚಕ ಸೆಣಸಾಟದಲ್ಲಿ ಪರಶುರಾಮ ತಂಡವು ಜಯಗಳಿಸಿ ಮೂನ್ ಸ್ಟಾರ್ ಟ್ರೋಫಿ ಹಾಗೂ ಪ್ರಥಮ ಬಹುಮಾನ ೭೭೮೮ ರೂ ಗಳನ್ನು ತನ್ನದಾಗಿಸಿಕೊಂಡಿತು.


ಸಂಜೆ ನಡೆದ ಬಹುಮಾನ ವಿತರಣ ಸಮಾರಂಭದಲ್ಲಿ ಭಟ್ಕಳ ಮಜ್ಲಿಸೆ ಇಸ್ಲಾಹ ತಂಝೀಮ್ ನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಮ್.ಜೆ. ನಗರ ಠಾಣೆಯ ಪಿಎಸ್.ಐ ಉಮೇಶ, ಮೂನ್ ಸ್ಪೋರ್ಟ್ಸ ಕ್ಲಬ್ ನ ಕಾರ್ಯದರ್ಶಿ ಸಜ್ಜಾದ್ ಕೋಲಾ ಮುಖ್ಯ ಅತಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮೂನ್ ಸ್ಟಾರ್ ನ ಅಧ್ಯಕ್ಷ ಯೂಸೂಫ್ ಬೆಳ್ನಿ ವಹಿಸಿದ್ದರು. ಜಾವಿದ್ ಅಹ್ಮದ್ ಹಾಜಿಫಕ್ಕಿ ಕಾರ್ಯಕ್ರಮವನ್ನು ನಿರೂಪಿಸಿದರು.
ಮೂನ್ ಸ್ಟಾರ್ ನ ಪ್ರಾಧಾನ ಕಾರ್ಯದರ್ಶಿ ಇನಾಯತುಲ್ಲಾ ಗವಾಯಿ, ಉಪಾಧ್ಯಕ್ಷ ಮೋಹಸಿನ್ ಬಾಫಖ್ಖಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಕಟ್ಟವೀರ ತಂಡದ ನಾಗರಾಜ ನಾಯ್ಕ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಪರಶುರಾಮ ತಂಡದ ದೀಪಕ್ ನಾಯ್ಕ, ಪಂದ್ಯಾವಳಿಯ ಆಲ್ ರೌಂಡರ್ (ಸವ್ಯಸಾಚಿ) ಪ್ರಶಸ್ತಿಯನ್ನು ಪರಶುರಾಮ ತಂಡದ ಮನೋಜ್ ನಾಯ್ಕ ಪಡೆದುಕೊಂಡರು.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ