ಮಾಸ್ಕೊ, ಡಿ.೭: ಭಾರತ ಹಾಗೂ ರಶ್ಯಗಳಿಂದು ವಿಸ್ತೃತ ನೆಲೆಯ ನಾಗರಿಕ ಪರಮಾಣು ಒಪ್ಪಂದವೊಂದಕ್ಕೆ ಸಹಿ ಹಾಕಿವೆ.
ಈ ಮಹತ್ವದ ಒಪ್ಪಂದವು ಭಾರತದ ಪರಮಾಣು ಸ್ಥಾವರಗಳಿಗೆ ತಾಂತ್ರಿಕತೆ ವರ್ಗಾವಣೆ ಹಾಗೂ ತಡೆರಹಿತ ಯುರೇನಿಯಂ ಪೂರೈಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ಮನಮೋಹನ ಸಿಂಗ್ ಹಾಗೂ ರಶ್ಯದ ಅಧ್ಯಕ್ಷ ದಿಮಿತ್ರಿ ಮೆಡ್ವೆಡೆವ್ ಇಂದು ಭೇಟಿಯಾದ ವೇಳೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ದ್ವಿಪಕ್ಷೀಯ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ರಶ್ಯ ಮೈತ್ರಿಯ ಬೆಲೆತೆತ್ತು ಇತರರೊಂದಿಗೆ ಸ್ನೇಹವಿಲ್ಲ: ಪ್ರಧಾನಿ
ಕಾಲಪರೀಕ್ಷಿತ ರಶ್ಯಾ ಸಂಬಂಧದ ಬೆಲೆತೆತ್ತು ಇತರ ರಾಷ್ಟ್ರಗಳೊಂದಿಗೆ ಭಾರತವು ಎಂದಿಗೂ ಮೈತ್ರಿ ಬೆಳೆಸುವುದಿಲ್ಲವೆಂದು ಮನಮೋಹನ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.
ರಶ್ಯದ ಅಧ್ಯಕ್ಷ ದಿಮಿತ್ರಿ ಮೆಡ್ವೆಡೆವ್‌ರನ್ನು ಭೇಟಿಯಾದ ಬಳಿಕ ಮೊದಲ ಹೇಳಿಕೆ ನೀಡಿದ ಅವರು, ರಶ್ಯದ ಮೈತ್ರಿಯ ಬೆಲೆ ತೆತ್ತು ಭಾರತ ತೃತೀಯ ರಾಷ್ಟ್ರಗಳೊಂದಿಗೆ ಸಂಬಂಧ ಏರ್ಪಡಿಸದು ಎಂದರು.
ಭಾರತ-ರಶ್ಯ ಸಂಬಂಧವು ಆರ್ಥಿಕ ಪುನಶ್ಚೇತನ, ಭಯೋತ್ಪಾದನೆ ಹಾಗೂ ವಾತಾವರಣ ಬದಲಾವಣೆಯಂತಹ ಪ್ರಮುಖ ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಮೇಲೆ ಪ್ರಭಾವ ಬೀರುವಷ್ಟು ಶಕ್ತವಾಗಿದೆಯೆಂದು ಪ್ರಧಾನಿ ಒತ್ತಿ ಹೇಳಿದರು.
ದ್ವಿಪಕ್ಷೀಯ ಸಂಬಂಧ ಸಂಬಂಧ ಬಲಗೊಂಡಿದ್ದು ವ್ಯಾಪಾರದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಈ ವರ್ಷ ಉಭಯ ದೇಶಗಳ ನಡುವೆ ವ್ಯಾಪಾರವು ಶೇ.೮ರಷವಟು ವೃದ್ಧಿಸಿದೆ. ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ಮೆಡ್ವೆಡೆವ್ ನುಡಿದರು.
ವಿಸ್ತೃತ ನಾಗರಿಕ ಪರಮಾಣು ಒಪ್ಪಂದ ಹಾಗೂ ಮೂರು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕುವುದಕ್ಕಾಗಿ ಪ್ರಧಾನಿ ಸಿಂಗ್, ಮೆಡ್ವೆಡ್‌ರನ್ನು ಸೋಮವಾರ ಭೇಟಿಯಾಗಲಿದ್ದಾರೆ.