ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಜ್ರಂಭಣೆಯಿದ ಸಂಪನ್ನ ಗೊಂಡ ಷೋಡಶ ನಾಗಮಂಡಲೋತ್ಸವ

ವಿಜ್ರಂಭಣೆಯಿದ ಸಂಪನ್ನ ಗೊಂಡ ಷೋಡಶ ನಾಗಮಂಡಲೋತ್ಸವ

Sat, 23 Mar 2024 06:10:54  Office Staff   SO News

ಭಟ್ಕಳ:ತಾಲೂಕಿನ ಅಳ್ವೆಕೋಡಿಯ ಆರ್ಕಟಿಮನೆಯ ವಿಶ್ವಶಕ್ತಿ ದೇವಸ್ಥಾನದಲ್ಲಿ ದೇವಿದಾಸ ಸ್ವಾಮಿ ಅವರ ನೇತೃತ್ವದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡ ಷೋಡಶ ಪವಿತ್ರ ನಾಗಮಂಡಲೋತ್ಸವ ಅತ್ಯಂತ ವಿಜ್ರಂಭಣೆಯಿದ ಸಂಪನ್ನಗೊಡಿತು.
ಜಿಲ್ಲೆಯಿದಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಯಿಂದಲೂ ಕೂಡಾ  ಸಾವಿರಾರರು ಭಕ್ತರು ಆಗಮಿಸಿದ್ದು ನಾಗಮಂಡಲೋತ್ಸವವನ್ನು ಕಣ್ತುಂಬಿಕೊಡರು. ಗುರುವಾರ ಸಂಜೆ ನಾಗದೇವರಿಗೆ ಪ್ರಸನ್ನ ಪೂಜೆ ಬಳಿಕ ಹಾಲಿಟ್ಟು ಸೇವೆಯೊಂದಿಗೆ  ಆರಂಭಗೊAಡ ನಾಗಮಂಡಲೋತ್ಸವ ಬೆಳಗಿನ ಜಾವ ೪ ಗಂಟೆಯವರೆಗೂ ನಡೆದು ನಂತರ ಬಲಿಪೂಜೆ, ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊAಡಿತು.  ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಷೋಡಶ ಪವಿತ್ರ ನಾಗಂಡಲೋÃತ್ಸವ ಏರ್ಪಡಿಸಿದ್ದ ಅಳ್ವೆಕೋಡಿ ಊರಿನಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಏರ್ಪಟ್ಟಿದ್ದು ಆರಂಭದಿAದ ಕೊನೆಯ ತನಕವೂ ಕೂಡಾ ಭಕ್ತರು ನಾಗಮಂಡಲೋತ್ಸವವನ್ನು ಭಕ್ತಿ ಭಾವದಿಂದ ನಮಿಸಿದರು. ನಾಗಮಂಡಲೋತ್ಸವವನ್ನು  ಕೋಟೇಶ್ವರದ ಗೋಪಾಡಿಯ ನಾಗಪಾತ್ರಿಯಾದ ವೆ.ಮೂ. ಶಂಕರನಾರಾಯಣ ಬಾಯರಿ, ಗೋಳಿ ಅಂಗಡಿಯ ವಾಸುದೇವ ವೈದ್ಯ ಮತ್ತು ಬಳಗ, ಮುದ್ದೂರಿನ ಕೃಷ್ಣಪ್ರಸಾದ ಮತ್ತು ಬಳಗ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟಿತು. ಮಾರ್ಚ ೧೫ ರಿಂದಲೇ ಆರಂಭಗೊAಡಿದ್ದ ನಾಗಮಂಡಲೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ರಾತ್ರಿಯ ಷೋಡಶ ಪವಿತ್ರ ನಾಗಮಂಡಲೋತ್ಸವದೊAದಿಗೆ ಅದ್ಧೂರಿಯಾಗಿ ಸಂಪನ್ನಗೊAಡಿತು. ವಿವಿಧ ಹೂವುಗಳಿಂದ ನಿರ್ಮಿಸಲಾದ ಭವ್ಯವಾದ ಮಂಟಪದಲ್ಲಿ ಆರಂಭಗೊAಡ  ನಾಗಮಂಡಲೋತ್ಸವಕ್ಕೆ  ವಾದ್ಯ ಮತ್ತು ಚಂಡೆ ಮೆರಗು ನೀಡಿತು. ೧೦ ಸಾವಿರಕ್ಕೂ ಅಧಿಕ ಅಡಕೆ ಸಿಂಗಾರ ಹೂವನ್ನು ನಾಗಮಂಡಲಕ್ಕೆ ಬಳಸಿಕೊಳ್ಳಲಾಯಿತು. ಮಾರ್ಚ ೧೫ ರಿಂದ ಪ್ರತಿನಿತ್ಯ ಏಳೆಂಟು ಸಾವಿರ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದ್ದರು. ಗುರುವಾರ ಒಂದೇ ದಿನ ಸುಮಾರು ೨೫ ಸಾವಿರಕ್ಕೂ ಅಧಿಕ ಭಕ್ತರು ಅಳ್ವೆಕೋಡಿ ಶ್ರೀ ವಿಶ್ವಶಕ್ತಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿ ನಾಗಮಂಡಲೋತ್ಸವವನ್ನು ವೀಕ್ಷಿಸಿದರು. ನಾಗಮಂಡಲ ವೀಕ್ಷಣೆಗೆ, ದೇವಿಯ ದರ್ಶನ, ಅನ್ನಸಂತರ್ಪಣೆ, ಪಾರ್ಕಿಂಗ್ ಹೀಗೆ ಎಲ್ಲವನ್ನೂ ಪ್ರಮುಖರು, ಸ್ವಯಂ ಸೇವಕರು, ಊರ ನಾಗರಿಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅಳ್ವೆಕೋಡಿಯಲ್ಲಿ ಷೋಡಶ ಪವಿತ್ರ ನಾಗಮಂಡಲೋತ್ಸವ ವಿಜೃಂಬಣೆಯಿAದ ನಡೆಸಿದ ಕೀರ್ತಿಗೆ ಅರ್ಕಾಟಿಮನೆ ಕುಟುಂಬಿಕರು ಭಾಜನರಾದರು


Share: