ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಅನಧಿಕೃತವಾಗಿ ಕಟ್ಟಿಗೆ ಸಾಗಿಸುತ್ತಿದ್ದಾತನ ಬಂಧನ

ಭಟ್ಕಳ:ಅನಧಿಕೃತವಾಗಿ ಕಟ್ಟಿಗೆ ಸಾಗಿಸುತ್ತಿದ್ದಾತನ ಬಂಧನ

Fri, 11 Dec 2009 17:15:00  Office Staff   S.O. News Service
ಭಟ್ಕಳ, ಡಿಸೆಂಬರ್ 11: ವಾಹನವೊಂದರಲ್ಲಿ (ಕೆ‌ಎ20ಎ 5000) ಅನಧಿಕೃತವಾಗಿ ಕಟ್ಟಿಗೆಯನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ನೂಜ್ 28 ಅರಣ್ಯ ಪ್ರದೇಶದ ಬಳಿ ಬಂಧಿಸಿದ್ದು, ಇಬ್ಬರು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ 6 ಗಂಟೆಯ ಸುಮಾರಿಗೆ ನಡೆದಿದೆ.
 
ಬಂಧಿತ ಆರೋಪಿಯನ್ನು ಕೆಂಚಗಾರಿನ ನಾಗರಾಜ ಕರಿಯಾ ಮೊಗೇರ ಎಂದು ಗುರುತಿಸಲಾಗಿದೆ. ಹೆಜ್ಜಿಲಿನ ಸುಬ್ಬಯ್ಯ ನಾರಾಯಣ ನಾಯ್ಕ ಹಾಗೂ ಶಿರೂರಿನ ಚಂದ್ರಹಾಸ ರಾಮ ಶೆಟ್ಟಿ ಪರಾರಿಯಾದವರಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಾಹನದಲ್ಲಿದ್ದ ೧.೬೭ಘಮೀ. ನಂದಿ ಚಿರಾವುನಗವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ 70,000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಎಸಿ‌ಎಫ್ ತಾಂಡೇಲ ಹಾಗೂ ಆರ್‌ಎಫ್‌ಓ ಎಮ್.ಜಿ.ನಾಯ್ಕ ಮಾರ್ಗದರ್ಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.


Share: