ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆ ಶೇ 54.20ರಷ್ಟು ಮತದಾನ

ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯ ವೇಳೆ ಶೇ 54.20ರಷ್ಟು ಮತದಾನ

Tue, 07 May 2024 23:22:13  Office Staff   SOnews

ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆ ಶೇ 54.20ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟನೆ ತಿಳಿಸಿದೆ.  

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 3 ಗಂಟೆ ವೇಳೆ ಶೇ59.65ರಷ್ಟು ಮತದಾನವಾಗಿದೆ. ಅದೇರೀತಿ, ಬೆಳಗಾವಿಯಲ್ಲಿ 53.85 ಶೇ., ಬಾಗಲಕೋಟೆಯಲ್ಲಿ54.95 ಶೇ., ವಿಜಯಪುರದಲ್ಲಿ49.88 ಶೇ., ಕಲಬುರಗಿಯಲ್ಲಿ 47.64 ಶೇ., ರಾಯಚೂರಿನಲ್ಲಿ 49.04 ಶೇ., ಬೀದರ್ ನಲ್ಲಿ 49.81 ಶೇ., ಕೊಪ್ಪಳದಲ್ಲಿ 55.06 ಶೇ., ಬಳ್ಳಾರಿಯಲ್ಲಿ 56.76 ಶೇ., ಹಾವೇರಿಯಲ್ಲಿ 58.45 ಶೇ., ಧಾರವಾಡದಲ್ಲಿ 55.00 ಶೇ., ಉತ್ತರ ಕನ್ನಡದಲ್ಲಿ 55.98 ಶೇ., ದಾವಣಗೆರೆಯಲ್ಲಿ 57.31 ಶೇ. ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 57.96 ಶೇ. ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟನೆಯ ಮೂಲಕ ಮಾಹಿತಿ ನೀಡಿದೆ.


Share: