ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಲಂಚ ಪಡೆದ ತೆರಿಗೆ ವಸೂಲಿ ಸಹಾಯಕನಿಗೆ ಶಿಕ್ಷೆ ಪ್ರಕಟ

ಲಂಚ ಪಡೆದ ತೆರಿಗೆ ವಸೂಲಿ ಸಹಾಯಕನಿಗೆ ಶಿಕ್ಷೆ ಪ್ರಕಟ

Wed, 10 Jul 2024 02:10:55  Office Staff   SOnews

 

ಕಾರವಾರ: ಮನೆಯ ಉತಾರು ಪತ್ರ ವಿತರಿಸಲು ಲಂಚ ಪಡೆದಿದ್ದ ತೆರಿಗೆ ವಸೂಲಿ ಸಹಾಯಕನಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 6 ತಿಂಗಳ ಸಾಧಾರಣ ಕಾರಾವಾಸ ಶಿಕ್ಷೆ ಹಾಗೂ ರೂ. 1000 ದಂಡ ಮತ್ತು ಕಲಂ 13(2) ರಡಿಯಲ್ಲಿ 1 ವರ್ಷ ಸಾಧಾರಣ ಕಾರಾವಾಸ ಶಿಕ್ಷೆ ಹಾಗೂ ರೂ 1000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ತಿಂಗಳು ಸಾಧಾರಣ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ: ಯಲ್ಲಾಪುರ ತಾಲೂಕಿನ ಉದ್ಯಮ ನಗರ ನಿವಾಸಿ ಮಂಜುನಾಥ ವಿಶ್ವೇಶ್ವರ ಹೆಗಡೆ ಅವರು ತಮ್ಮ ತಾಯಿಯವರ ಹೆಸರಿನಲ್ಲಿದ್ದ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳುವುದಕ್ಕಾಗಿ ವಿದ್ಯುತ್ ಸರಬರಾಜು ಇಲಾಖೆಗೆ ಸಲ್ಲಿಸಿದ ಅರ್ಜಿಗೆ ಸಂಬAಧಿಸಿದAತೆ ಮನೆಯ ಉತಾರು ಸಲ್ಲಿಸಬೇಕಾಗಿರುವುದರಿಂದ ಯಲ್ಲಾಪುರ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಸಕಾಲದಡಿ ಮನೆಯ ಉತಾರಿಗಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬAಧಿಸಿದAತೆ 4-5 ದಿನ ಬಿಟ್ಟು ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕನಿಗೆ ವಿಚಾರಿಸಿದಾಗ, ಯಲ್ಲಾಪುರ ಪಟ್ಟಣ ಪಂಚಾಯತ್ ಕಾರ್ಯಾಲಯದ ತೆರಿಗೆ ವಸೂಲಿ ಸಹಾಯಕ ಪ್ರಕಾಶ ಕೃಷ್ಣ ನಾಯ್ಕ ಇವರು, ಸೈಟ್ ನೋಡಿ ಉತಾರು ನೀಡಬೇಕಾಗುತ್ತದೆ ಹಾಗೂ ಚೀಫ್ ಆಫೀಸರ್ ಅವರ ಸಹಿ ಮಾಡಿಸಿ ನಾಳೆ ಕೊಡುವುದಾಗಿ ತಿಳಿಸಿದ್ದು, ಮಾರನೇ ದಿನ ತೆರಿಗೆ ವಸೂಲಿ ಸಹಾಯಕನಿಗೆ ಭೇಟಿ ಮಾಡಿದಾಗ ಉತಾರು ಬೇಕಾದರೆ ಅಧಿಕಾರಿಗೆ ಕೊಡಬೇಕಾಗುತ್ತದೆ ಅದಕ್ಕೆ ರೂ. 6000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ನಂತರದಲ್ಲಿ 4000 ಲಂಚ ಪಡೆಯಲು ಒಪ್ಪಿಕೊಂಡು, ಹಣವನ್ನು ಮತ್ತೊಬ್ಬ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಇವರಿಗೆ ನೀಡಲು ತಿಳಿಸಿದ್ದು, ಅದರಂತೆ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ರೂ 4000 ಲಂಚ ಪಡೆಯುವಾಗ ಟ್ರಾಪ್ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷಿö್ಮಕಾಂತ ಎಮ್ ಪ್ರಭು ವಾದ ಮಂಡಿಸಿರುತ್ತಾರೆ.


Share: