
ಮಂಗಳೂರು, ಎ.25: ಮಂಗಳೂರಿನ ‘ಗೋಲ್ಡ್ ಪ್ಯಾಲೇಸ್’ ಮತ್ತು ಉಡುಪಿಯ ‘ವೆಡ್ಡಿಂಗ್ ಪ್ಯಾಲೇಸ್‌ನಲ್ಲಿ ಎ.26ರಿಂದ ಮೇ 16ರ ವರೆಗೆ ನಡೆಯುವ ‘ಮದುವೆಯ ಹಬ್ಬ’ ವಾರ್ಷಿಕೋತ್ಸವದ ಮಹಾಸಂಭ್ರಮಾಚರಣೆ ಗ್ರಾಹಕರಿಗೆ ಈ ವರ್ಷದ ಭಾರೀ ಲಾಭದಾಯಕ ಸಾಪಿಂಗ್ ಧಮಾಕ ಆಗಲಿದೆ.
ಆಕರ್ಷಕ ಕೊಡುಗೆಗಳು, ಅತ್ಯುತ್ತಮ ಬೆಲೆಗಳು, ಉಚಿತ ಉಡುಗೊರೆ, ಗಿಫ್ಟ್ ವೋಚರ್, ನಗದು ರಿಯಾಯಿತಿಗಳ ಜೊತೆಯಲ್ಲಿ ಶಾಪ್ ಆ್ಯಂಡ್ ವಿನ್‌ನಲ್ಲಿ ಹುಂಡೈ ಐ-10 ಕಾರು ಗೆಲ್ಲುವ ಅವಕಾಶ ಗ್ರಾಹಕರಿಗಿದೆ.
ವಜ್ರ ಪ್ರದರ್ಶನ: ಮಂಗಳೂರಿನ ‘ಗೋಲ್ಡ್ ಪ್ಯಾಲೆಸ್’ ಮತ್ತು ಉಡುಪಿಯ ‘ವೆಡ್ಡಿಂಗ್ ಪ್ಯಾಲೆಸ್’, ದೇಶದ ಅಗ್ರಗಣ್ಯ ವಜ್ರ ವ್ಯವಹಾರ ಸಂಸ್ಥೆಯಾದ ಡಿವೈನ್ ಸಾಲಿಟ್ಯಾರ್‌ನ ಸಹಯೋಗದೊಂದಿಗೆ ಚಿಲ್ಲರೆ ವಜ್ರ ಖರೀದಿದಾರರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ.
ಭಾರತದ ಪ್ರಥಮ ಬ್ರಾಂಡ್‌ನ ಸುಂದರ ಮತ್ತು ಅತ್ಯುತ್ತಮ ಗುಣಮಟ್ಟದ ಕುಶಲತೆಯಿಂದ ತಯಾರಿಸಲಾದ ಚಿಲ್ಲರೆ ವಜ್ರದ ಆಭರಣಗಳು ‘ವೆಡ್ಡಿಂಗ್ ಪ್ಯಾಲೆಸ್’ ಮತ್ತು ‘ಗೋಲ್ಡ್ ಪ್ಯಾಲೆಸ್’ನಲ್ಲಿ ಮಾತ್ರ ಲಭ್ಯವಿವೆ.
‘ಒಂದು ಖರೀದಿಸಿ ಎರಡು ಪಡೆಯಿರಿ’ ಎಂಬ ವಜ್ರ ಪ್ರದರ್ಶನ -ಕೊಡುಗೆ ಇಲ್ಲಿದೆ. (ಒಂದು ಉತ್ಕೃಷ್ಟ ವಜ್ರದ ಮಣಿ ಇರುವ ಆಭರಣ ಖರೀದಿಗೆ ಮತ್ತೊಂದು ಉಚಿತ). ಈ ಕೊಡುಗೆಯನ್ನು ಉಡುಪಿಯ ‘ವೆಡ್ಡಿಂಗ್ ಪ್ಯಾಲೆಸ್’ನಲ್ಲಿ ಎಪ್ರಿಲ್ 27ರಿಂದ 30ರ ವರೆಗೆ ಮತ್ತು ಮಂಗಳೂರಿನ ‘ಗೋಲ್ಡ್ ಪ್ಯಾಲೆಸ್’ನಲ್ಲಿ ಮೇ 1ರಿಂದ 4ರವರೆಗೆ ಲಭ್ಯವಿದೆ.
1ಕ್ಯಾರೆಟ್ (100 ಸೆಂಟ್ಸ್) ಡಿವೈನ್ ಸಾಲಿಟ್ಯಾರ್ ವಜ್ರ ಖರೀದಿಸಿದರೆ 0.18 ಸೆಂಟ್ಸ್‌ನಷ್ಟು ಹೆಚ್ಚುವರಿ ಆಭರಣ ಪಡೆದಂತಾಗುತ್ತದೆ. ಒಂದು ಕ್ಯಾರೆಟ್‌ಗಿಂತ ಕಡಿಮೆ ಪ್ರಮಾಣದ ಖರೀದಿಗೆ ರಿಯಾಯಿತಿ ಮೊತ್ತದಲ್ಲಿ 0.18 ಸೆಂಟ್ಸ್ ವಜ್ರ ನೀಡಲಾಗುತ್ತದೆ.ಈ ವಿಶೇಷ ಸಂದರ್ಭದಲ್ಲಿ ಡಿವೈನ್ ಸಾಲಿಟ್ಯಾರ್‌ನವರು ಹಾರ್ಟ್ಸ್ ಮತ್ತು ಆ್ಯರೋಸ್ ಸ್ಕ್ವೇರ್‌ನ ಅತ್ಯಾಕರ್ಷಕ ವಿನ್ಯಾಸದ ವಜ್ರಗಳನ್ನು ಗ್ರಾಹಕರಿಗೆ ಪರಿಚಯಿಸಲಿದ್ದಾರೆ.
ಡಿವೈನ್ ಸಾಲಿಟ್ಯಾರ್‌ನ ವಜ್ರ ಖರೀದಿಗೆ ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿ ಒಂದು ವರ್ಷದ ಅವಧಿಗೆ ಇನ್ಸೂರೆನ್ಸ್ ನೀಡಲಿದೆ. ಒಂದು ವೇಳೆ ಖರೀದಿಸಿದ ಆಭರಣಗಳು ಕಳವಾದರೆ ಅಥವಾ ದರೋಡೆಗೈಯ್ಯಲ್ಪಟ್ಟರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಫ್‌ಐಆರ್ ಪ್ರತಿಯನ್ನು ಕಂಪೆನಿಗೆ ಸಲ್ಲಿಸಿದರೆ ಇನ್ಸೂರೆನ್ಸ್ ನೇರವಾಗಿ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.