ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಬಾಗೆ ಗ್ರಾಮದ ಕಾರ್ಯಕ್ರಮ ಪಕ್ಷಕ್ಕೆ ಮಾರಕ - ಕಾಂತರಾಜ್ ಎಚ್ಚರಿಕೆ

ಸಕಲೇಶಪುರ: ಬಾಗೆ ಗ್ರಾಮದ ಕಾರ್ಯಕ್ರಮ ಪಕ್ಷಕ್ಕೆ ಮಾರಕ - ಕಾಂತರಾಜ್ ಎಚ್ಚರಿಕೆ

Sun, 03 Jan 2010 15:17:00  Office Staff   S.O. News Service
ಸಕಲೇಶಪುರ: ಇತ್ತಿಚಿಗೆ ಬಾಗೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ  ಹೆಸರಿನಲ್ಲಿ ನಡೆದ ಕಾರ್ಯಕ್ರಮ ಪಕ್ಷಕ್ಕೆ ಮಾರಕವಾದದ್ದು, ಇಂತಹ ಬೆಳವಣಿಗೆ ಮರುಕಳಿಸಬಾರದು ಅಥವಾ ಯಾರೂ ಪ್ರೋತ್ಸಾಹಿಸಬಾರದು ಎಂದು ತಾಲ್ಲೂಕು ಕಾಂಗ್ರೆಸ್ ಅದ್ಯಕ್ಷ ಎಚ್.ಬಿ.ಕಾಂತರಾಜ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮ ಇಲ್ಲಿಯ ಪ್ರಮುಖರ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಚಾರ ವಿನಿಮಯ ಮಾಡಿ ನಡೆಸಬೇಕಾಗಿತ್ತು ಯಾರ ಗಮನಕ್ಕೂ ತಾರದೆ ನಡೆಸಿದ್ದು ವಿಷಾದನೀಯ ಎಂದು ಹೇಳಿದರು.

ಪಕ್ಷದಲ್ಲಿ ಒಡಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದು, ಇವರ ದೊರಣೆ ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ಶಿಸ್ತಿನಕ್ರಮ ಕೈ ಗೊಳ್ಳಲಾಗೂವುದು ಎಂದು ಎಚ್ಚರಿಸಿದರು.

ಬಾಗೆ ಕಾರ್ಯಕ್ರಮಕ್ಕೆ ತಾಲ್ಲೂಕು ಪ್ರಮುಖ ಕಾರ್ಯಕರ್ತರು ಗೈರೂ ಹಾಜರಾಗಿದ್ದರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾರೂ ಬಾಗವಹಿಸಬಾರದು ಎಂದು ಯಾರಿಗೂ ಹೇಳಿರಲಿಲ್ಲ ಹಾಗೂ ಹೇರಿರಲಿಲ್ಲ, ಪಕ್ಕಕ್ಕೆ ಒಳಿತು ಮಾಡುವುದೇ ನಮ್ಮ ಕೆಲಸ ಎಂದರು.

ಪಕ್ಷದಲ್ಲಿ ಬೆಳವಣಿಗೆ ಯಾಗಲು ಆರೋಗ್ಯಕರಮಾದ ಚಿಂತನೆಯ ರ್ಮಾಗದಲ್ಲಿ ಮುಂದುವರೆಯ ಬೇಕು ಇಲ್ಲ ಸಲ್ಲದ ದಾರಿ ಅನುಸರಿಸಬಾರದು, ಇದೆಲ್ಲಾ ತಾತ್ಕಾಲಿಕ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ ದುಡಿದರೆ ಮಾತ್ರ ಗುರಿ ಮುಟ್ಟಲು ಸಾದ್ಯ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದವರು, ಮನಸ್ತಾಪ ವಿಭಿನ್ನಾಬಿಪ್ರಾಯ ಪರಿಹರಿಸಲು ಪಕ್ಷದ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಪಕ್ಷದಲ್ಲಿ ಯಾವ ಬಣವೂ ಇಲ್ಲ, ಶ್ರೀಕಂಠಯ್ಯ ಪಕ್ಷಕ್ಕೆ ಬರುವ ವಿಚಾರದಲ್ಲಿ ನಮ್ಮ ಸ್ವಾಗತವಿದೆ, ಇದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಸ್ತಾರೆ ಲೋಕೇಶ್,  ಡಿ.ಸಿ.ಸಣ್ಣಸ್ವಾಮಿ. ರಾಜಶೇಖರ್. ಹೆಗ್ಗೊವೆ ಸಂಜಯ್. ದೋಡ್ಡೀರಯ್ಯ. ಮನ್ಸೂರ್. ಸುಂದರಮ್ಮ. ಕೌಸಲ್ಯಲಕ್ಷ್ಮಣೇಗೌಡ. ನಿರ್ಮಲಪವಿತ್ರನ್. ಪ್ರಜ್ವಲ್‌ಪ್ರಕಾಶ್. ಮಂಜು. ಜಗದೀಶ್. ಸಿದ್ದವೀರಪ್ಪ.  ಉಪಸ್ಥಿತರಿದ್ದರು


Share: