ಮಂಗಳೂರು, ಏಪ್ರಿಲ್ ೩೦: ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಡಾ.ಜಸ್ಟಿಸ್ ಎಸ್.ಆರ್. ನಾಯಕ್ ಅವರು ಮೇ ೧ರಂದು ಸಂಜೆ ೬ ಗಂಟೆಗೆ ಬಜಪೆಗೆ ಆಗಮಿಸಿ ಸರ್ಕೂಟ್ ಹೌಸ್‌ನಲ್ಲಿ ತಂಗುವರು. ಮೇ೨ರಂದು ಸರ್ಕೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುವರು. ಮೇ ೩ರಂದು ಬೆ.೯ ಗಂಟೆಗೆ ಮಂಗಳೂರಿನಿಂದ ಬಂಟ್ವಾಳ ಮುಖಾಂತರ ಬೆಳ್ತಂಗಡಿಗೆ ತೆರಳುವರು.
ಅಲ್ಲಿಂದ ೩.೩೦ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವರು. ಅಲ್ಲಿಂದ ೯.೩೦ಕ್ಕೆ ಹೊರಟು ಪುತ್ತೂರು ತಲುಪುವರು. ಪುತ್ತೂರಿನಲ್ಲಿ ವಾಸ್ತವ್ಯ. ಮೇ ೪ರಂದು ಬೆ. ೧೧ ಗಂಟೆಗೆ ಪುತ್ತೂರಿನಲ್ಲಿ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದಂತೆ ಪುತ್ತೂರು ತಾಲೂಕು ಕಚೇರಿಯಲ್ಲಿ ದೂರು ಸ್ವೀಕರಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ೬ಗಂಟೆಗೆ ಮಂಗಳೂರಿಗೆ ಹಿಂದಿರುಗುವರು. ೫ರಂದು ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವರು.