ಗಾಝಿಯಬಾದ್ : ಹಿಂದೂ ರಕ್ಷಾ ದಳದ ಗುಂಪಿಗೆ ಸೇರಿದ ಹಿಂದುತ್ವ ಕಾರ್ಯಕರ್ತರ ಗುಂಪು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಕೊಳಗೇರಿ ನಿವಾಸಿಗರ ಮೇಲೆ 'ಬಾಂಗ್ಲಾದೇಶಿ ನುಸುಳುಕೋರರು' ಎಂದು ಆರೋಪಿಸಿ ದಾಳಿ ಮಾಡಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಆಗಸ್ಟ್ 8 ರಂದು ರೈಲು ನಿಲ್ದಾಣದ ಬಳಿ ಈ ಘಟನೆಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದ್ದು ದಾಳಿಕೋರರು ದೊಣ್ಣೆಗಳಿಂದ ಹೊಡೆದು ಅವರ ಗುಡಿಸಲುಗಳನ್ನು ಬೆಂಕಿಯಿಂದ ಸುಟ್ಟು ಧ್ವಂಸಗೊಳಿಸಿದ್ದಾರೆ.
ಅಮಾಯಕ ಮುಸ್ಲಿಮರ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಹಿಂದೂ ರಕ್ಷಾ ದಳದ ಮುಖ್ಯಸ್ಥ ಪಿಂಕಿ ಚೌಧರಿ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ.
ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ ಮತ್ತು ಅವರ ಸಹಚರರು ಗಾಜಿಯಾಬಾದ್ ಬಳಿಯ ಬಡ ಭಾರತೀಯ ಮುಸ್ಲಿಂ ಕೊಳೆಗೇರಿ ನಿವಾಸಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ನಿನ್ನೆ, ಹೊಸದಿಲ್ಲಿಯಲ್ಲಿ "ಬಾಂಗ್ಲಾದೇಶಿಗಳ" ಮೇಲೆ ದಾಳಿ ಮಾಡಿದ ತನ್ನ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.
ಗಾಜಿಯಾಬಾದ್ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಅಲ್ಲಿ ಯಾವುದೇ ಬಾಂಗ್ಲಾದೇಶಿಗಳು ತಂಗಿಲ್ಲ ಎಂದು ಖಚಿತಪಡಿಸಿದ್ದಾರೆ.