ಭಟ್ಕಳ, ಡಿಸೆಂಬರ್ 14:ಸಾರ್ವಜನಿಕ ಗಣೇಶೋತ್ಸವ ಸಮೀತಿಯು ಪ್ರತಿವರ್ಷವು ನಡೆಸಿಕೊಂಡು ಬರುತ್ತಿದ್ದ ಮುಂಡಳ್ಳಿ ಕೋಣನ ಕಂಬಳವನ್ನು ಉದ್ಯಮಿ ಜೆ.ಎನ್.ನಾಯ್ಕ ದೀಪ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಷ್ಟಪಟ್ಟು ಕೆಲಸ ಮಾಡುವ ಜಾಯಮಾನ ಈಗ ಮಾಯವಾಗುತ್ತಿದ್ದು ಅದು ಹೀಗೆಯೆ ಮುಂಜದುವರಿದರೆ ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರವು ಬರಿದಾಗುತ್ತದೆ ಎಂದು ಆತಂಕಿಸಿದ ಅವರು ರೈತನ ಗೋಳು ಸರಕಾರದ ಕಿವಿಗೆ ಬೀಳದಿರುವುದು ಖೇದಕರ ಎಂದರು. ರೈತ ನಮ್ಮ ದೇಶದ ಬೆನ್ನಲುಗು ಆಗಿದ್ದು ಬಿತ್ತಿದ ಹೊಲದಲ್ಲಿ ರೈತನಿಗೆ ಹಾನಿ ಉಂಟಾಗುತ್ತಿದೆ ಅದಕ್ಕಾಗಿ ಸರಕಾರವು ರೈತನ ನೆರವಿಗೆ ಬರಬೇಕು ಎಂದರು. ವೇದಿಕೆಯಲ್ಲಿ ಮುಂಡಳ್ಳಿ ಗ್ರಾ.ಪಂ.ಅಧ್ಯಕ್ಷ ನಾಗಪ್ಪ ನಾಯ್ಕ, ಸದಸ್ಯ ಕೃಷ್ಣಪ್ಪ ನಾಯ್ಕ, ಭಾಸ್ಕರ ಬೈದ್ಯಮನೆ ಮುಂತಾದವರು ಉಪಸ್ಥಿತರಿದ್ದರು.
ಮುಂಡಳ್ಳಿ ಕೋಣನ ಕಂಬಳದಲ್ಲಿ 27 ಜೊತೆ ಕೋಣಗಳು ಸ್ಪರ್ದೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ನಾರಾಯಣ ಬೆದರಿಕೇರಿಯವರ ಕೋಣ ೯.೫೯ಸೆ ಗಳಲ್ಲಿ ೧೦೦ಮೀ ತಲುಪಿ ಪ್ರಥಮ ಸ್ಥಾನವನ್ನು ಗಳಿಸಿತು.ತಲಾಂದ ನಾಗೇಶ ಹೆಬ್ಬಾರ ಅವರ ಕೋಣವು ೯.೮೪ ಸೆ.ಗಳಲ್ಲಿ ದ್ವಿತೀಯಾ ಸ್ಥಾನವನ್ನು ಗಳಿಸಿತು.