ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ವಿಕೋಪಕ್ಕೆ ತಿರುಗಿದ ರಿಕ್ಷಾ ಚಾಲಕನ ಮೇಲಿನ ಹಲ್ಲೆ ಪ್ರಕರಣ - ರಿಕ್ಷಾ ಚಾಲಕರ ಪ್ರತಿಭಟನೆ

ಭಟ್ಕಳ: ವಿಕೋಪಕ್ಕೆ ತಿರುಗಿದ ರಿಕ್ಷಾ ಚಾಲಕನ ಮೇಲಿನ ಹಲ್ಲೆ ಪ್ರಕರಣ - ರಿಕ್ಷಾ ಚಾಲಕರ ಪ್ರತಿಭಟನೆ

Mon, 26 Oct 2009 02:27:00  Office Staff   S.O. News Service
ಭಟ್ಕಳ, ಅಕ್ಟೋಬರ್ 25:  ಇಂದು ಮಧ್ಯಾಹ್ನ ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ಬಂದರಿನ 6 ಜನರ ಗುಂಪೊಂದು ರಿಕ್ಷಾ ಬಾಡಿಗೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕನ ಮೇಲೆ  ಹಲ್ಲೆ ಮಾಡಿದ್ದು ಜೀವ ಬೆದರಿಕೆಯನ್ನು ಹಾಕಿದ್ದಾರೆಂದು ಆರೋಪಿಸಿ ವಸಂತ ನಾರಾಯಣ ನಾಯ್ಕ ಎಂಬುವವರು ನಗರಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ ಖಾರ್ವಿ ಮಹೇಶ ಮಂಜುನಾಥ್ ಖಾರ್ವಿ ಹಾಗೂ ಗೋಪಾಲ ಖಾರ್ವಿ ಎಂಬುವರನ್ನು ಬಂಧಿಸಲಾಗಿದ್ದು ತಲೆಮರೆಸಿಕೊಂಡಿರುವ ಇನ್ನೂ ಮೂವರನ್ನು ಬಂದಿಸಲು ಪೋಲಿಸರು ಜಾಲ ಬೀಸಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕರು ಹಾಗೂ ನಾಮಧಾರಿ ಸಮಾಜದ ನೂರಾರು ಜನರು ಸೇರಿ ನಗರ ಠಾಣೆಯಲ್ಲಿ ಪ್ರತಿಭಟನೆಯನ್ನು ಮಾಡಿ ರಿಕ್ಷಾಚಾಲಕರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಅವರ ಮೇಲೆ ಕಠಿಣ ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಿದ್ದು ಪರಿಸ್ತಿತಿಯನ್ನು ನಿಯಂತ್ರಿಸಲು ಪೊಲಿಸರು ಲಘುಲಾಠಿ ಪ್ರಹಾರವನ್ನು ಮಾಡಬೇಕಾಯಿತು. ಇಂದಿನ ರಿಕ್ಷಾ ಚಾಲಕನ ಮೇಲೆ ಮಾಡಿದ ಹಲ್ಲೆಯು ಜಾತಿಜಗಳದಲ್ಲಿ ಪರ್ಯಾವಸನಗೊಂಡಿದ್ದು ನಾಮಧಾರಿ ಹಾಗೂ ಖಾರ್ವಿ ಸಮಾಜ ದವರಲ್ಲಿ ಹಲವಾರು ದಿನಗಳಿಂದ ಒಳಗೊಳಗೆ ಕುದಿಯುತ್ತಿದ್ದ ರೋಷವು ಹೊರಬಂದಂತಾಗಿದೆ. ಪರಿಸ್ಥಿತಿಯ ಗಂಭಿರತೆಯನ್ನು ಅರಿತ ಡಿ.ವೈ‌ಎಸ್.ಪಿ ಡಾ.ವೇದಮೂರ್ತಿ ಭಟ್ಕಳ ನಗರ ಸೇರಿದಂತೆ ಪುರವರ್ಗ, ಬಂದರ್, ಮುಟ್ಟಳ್ಳಿ, ಮುಂಡಳ್ಳಿ, ಕರಿಕಾಲ ಪ್ರದೇಶದಲ್ಲಿ ರವಿವಾರ ಸಂಜೆ 6 ಗಂಟೆಯಿಂದ ಸೋಮವಾರ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರುವಂತೆ ಸೆಕ್ಷನ್ 144 ಹೇರಿದ್ದಾರೆ.
25-bkl1.jpg
ಕ್ಷುಲ್ಲುಕ ಕಾರಣಕ್ಕೆ ನಡೆದ ಘಟನೆಯು ತೀವ್ರ ಸ್ವರೂಪ ಪಡೆದು ಜಾತಿಯತೆಯ ಬಣ್ಣ ಪಡೆದುಕೊಂಡ ಪರಿಣಾಮ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಇಂದು ಮದ್ಯಾಹ್ನ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾದ ಪ್ರಸಂಗ ಬಂದೊದಗಿತು.
25-bkl2.jpg
 
ರಿಕ್ಷಾ ಡ್ರೈವರನ ಮೇಲೆ ಹಲ್ಲೆ ಯ ಸುದ್ದಿ ತಿಳಿಯುತ್ತಿದ್ದಂತೆ ಒಂದೆಡೆ ರಿಕ್ಷಾ ಡ್ರೈವರವರು ಹಲ್ಲೆ  ಮಾಡಿದ ಆರೋಪಿಗಳನ್ನು ಬಂದಿಸಬೇಕು ಎಂದು ಜಮಾಯಿಸಿದರೆ, ಇನ್ನೊಂದೆಡೆ ನಾಮಧಾರಿ ಸಮಾಜದ ಮೇಲೆ ಹಲ್ಲೆಯನ್ನು ಖಾರ್ವಿ ಸಮಾಜದವರು ಮಾಡುತ್ತಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ತಾಲೂಕಿನಾಧ್ಯಂತ ನಾಮಧಾರಿ ಯುವಕರು ಪೊಲೀಸ್ ಠಾಣೆಗೆ ಜಮಾಯಿಸಿದ್ದರಿಂದ ನಗರದಲ್ಲಿ ಪ್ರಕ್ಷುಬ್ದ ವಾತವರಣ ಉಂಟಾಗಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಮಾಡಿದರಾದರೂ ಪರಿಸ್ಥಿತಿ ಉಲ್ಬಣಗೊಂಡಿದ್ದರಿಂದ ಹಿಂದೂ ಮುಖಂಡರಾದ  ಎನ್.ಜಿ.ಕೊಲ್ಲೆ, ಸುರೇಂದ್ರ  ಶಾನುಭಾಗ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಂಚಾಲಕರಾದ ಗೋವಿಂದ ನಾಯ್ಕ, ನಾಮಧಾರಿ ಕ್ರಿಯ ಸಮೀತಿಯ ಶ್ರೀದರ ನಾಯ್ಕ, ರಿಕ್ಷಾ  ಯೂನಿಯನ ಅಧ್ಯಕ್ಷರು ಮದ್ಯಸ್ತಿಕೆ ವಹಿಸಿ ಪರಿಸ್ಥಿತಿಯ ನಿಯಂತ್ರಿಸಿದರಾದರೂ ಪರಿಸ್ತಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ  ಖಾರ್ವಿ ಸಮಾಜ ಹಾಗೂ ನಾಮಧಾರಿ ಸಮಾಜದ ಮುಖಂಡರನ್ನು ಒಟ್ಟಿಗೆ ಸೇರಿಸುವ ನಿರ್ಧಾರಕ್ಕೆ ಬಂದರಾದರೂ ಪರಿಸ್ಥಿತಿ. ನಿಯಂತ್ರಣಕ್ಕೆ ಬಾರದೇ ಬಾರದೇ ಇದ್ದಾಗ ಪೊಲೀಸರು ನಗರದಲ್ಲಿ ೧೪೪  ಕಲಂ ಜಾರಿ ಗೊಳಿಸಿದ್ದಾರೆ.
 
25-bkl3.jpg
 
ತಾಲೂಕಿನ ಬಂದರ ಮಾವಿನಕುರ್ವೆ, ತಲಗೋಡು ಹಾಗೂ ಭಟ್ಕಳ ನಗರ ಸೇರಿದಂತೆ ಮುಂಡಳ್ಳಿ, ಮುಠ್ಠಳ್ಳಿ ಮೂಡಭಟ್ಕಳಗಳಲ್ಲಿ ೫ ಕ್ಕೂ ಹೆಚ್ಚು ಜನರು ಗುಂಪು ಕಟ್ಟಿಕೊಂಡು ತಿರುಗಾಡುವುದನ್ನು ನಿಷೇದಿಸಲಾಗಿದ್ದು ೧೪೪ ಕಲಂ ಇಂದು ಸಂಜೆ ೬ ಗಂಟೆಯಿಂದ ನಾಳೆ ೬ ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಡಿ.ಎಸ್.ಪಿ. ಡಾ. ವೇದಮೂರ್ತಿ ತಿಳಿಸಿದ್ದಾರೆ.
25-bkl4.jpg
 
 
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: