ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

ಮುರ್ಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂಧಿ

Sun, 13 Oct 2024 20:40:01  Office Staff   SO News

ಭಟ್ಕಳ: ರಜೆ ದಿನಗಳನ್ನು ಕಳೆಯಲುದು ಬೆಂಗಳೂರಿನಿಂದ ಮರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ 19 ವರ್ಷದ ಪುನೀತ್ ಎಂಬ ಯುವಕ ಸಮುದ್ರದಲ್ಲಿ ಈಜುವಾಗ ಸಮುದ್ರದಲೆಗಳಿಗೆ ಸಿಲುಕಿದ್ದು,  ಲೈಫ್‌ಗಾರ್ಡ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆ ಮೂಲಕ ಯುವಕನ ಜೀವವನ್ನು ರಕ್ಷಿಸಿದ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಪುನೀತ್ ಎಂಬಾತನು ತನ್ನ ಇತರ ನಾಲ್ವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಮರ್ಡೇಶ್ವರಕ್ಕೆ ಪ್ರವಾಸಕ್ಕಾಗಿ ಬಂದಿದ್ದನು. ಬೆಳಗ್ಗೆ ಸಮುದ್ರದಲ್ಲಿ ಈಜಲು ಹೋಗಿದ್ದಾಗ, ಅಲೆಗಳಲ್ಲಿ ಸಿಲುಕಿದ್ದ ಅತನನ್ನು ಗಮನಿಸಿದ ಲೈಫ್‌ಗಾರ್ಡ್‌ ಸಿಬ್ಬಂದಿ ಶೇಖರ್ ದೇವಾಡಿಗ, ಗಿರಿ ಹರಿಕಾಂತ್, ಲೋಹಿತ್ ಹರಿಕಾಂತ್ ಮತ್ತು ಸ್ಥಳೀಯ ಮೀನುಗಾರರಾದ ಗುಂಡೋ ಹರಿಕಾಂತ್, ಸಂತೋಷ್ ಹರಿಕಾಂತ್  ರಕ್ಷಣೆ ಮಾಡಿದರು ಎಂದು ತಿಳಿದುಬಂದಿದೆ. 

ಕೊನೆಯ ಕೆಲವು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಮುಂದಿನ ಕೆಲವು ದಿನ ಭಾರೀ ಮಳೆಯ ಮುನ್ಸೂಚನೆ ಇದೆ. ಲೈಫ್‌ಗಾರ್ಡ್ ಸಿಬ್ಬಂದಿ ಈ ಸಮಯದಲ್ಲಿ ಸಮುದ್ರದಲ್ಲಿ ಈಜುವುದನ್ನು ತಪ್ಪಿಸಲು ಪ್ರವಾಸಿಗರಿಗೆ ನಿರಂತರ ಎಚ್ಚರಿಕೆ ನೀಡುತ್ತಿದ್ದಾರೆ.

 ವಾರದ ಹಿಂದೆ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟ ಹಿನ್ನೇಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಶನಿವಾರ  ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ  ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share: