ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರದ ಸ್ಫೂರ್ತಿ ಎಸ್ ಅಡಿಗಳ್ ಅವರಿಗೆ ಮಣಿಪಾಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪ್ರಧಾನ.

ಮುರ್ಡೇಶ್ವರದ ಸ್ಫೂರ್ತಿ ಎಸ್ ಅಡಿಗಳ್ ಅವರಿಗೆ ಮಣಿಪಾಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪ್ರಧಾನ.

Wed, 26 Jun 2024 03:29:45  Office Staff   SO News

ಭಟ್ಕಳ:  ಪ್ರತಿಷ್ಟಿತ ಮಣಿಪಾಲ್ ಯುನಿವರ್ಸಿಟಿ ಆಫ್ ಹೈಯರ್ ಎಜ್ಯುಕೇಶನ್ ನಿಂದ ತಾಲೂಕಿನ ಮುರ್ಡೇಶ್ವರದ ನಿವಾಸಿ ಸ್ಪೂರ್ತಿ ಎಸ್. ಅಡಿಗಳ್ ಅವರ "ಬಯೋಫಟೋನಿಕ್ಸ"  (Biophotonics ) ಪ್ರಬಂಧಕ್ಕೆ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.

ಸ್ಪೂರ್ತಿ ಎಸ್. ಅಡಿಗಳ್ ಈಕೆಯು ಡಾ. ಸಂತೋಷ ಚಿದಂಗಿಲ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಹ್ಯೂಮನ್ ಟಿಯರ್ ಸ್ಯಾಂಪಲ್ ಸ್ಟಡೀಸ್ ಯೂಸಿಂಗ್ ಹೈ ಪರ್ಫಾಮೆನ್ಸ್ ಲಿಕ್ವಿಡ್ ಕ್ರೊಮೊಟೋಗ್ರಫಿ ವಿತ್ ಎಲ್ಇಡಿ ಇಂಡ್ಯೂಸಡ ಫ್ಲೋರೋಸೀನ್ (ಎಚ್ಪಿಎಲ್ಸಿ-ಎಲ್ಇಡಿ-ಐಎಫ್) ಎಂಡ್ ಸರ್ಫೇಸ್ ಎನ್ಹಾನ್ಸಡ್ ರಾಮನ್ ಸ್ಪೆಕ್ಟೋಸ್ಕೋಪಿಕ್ ಟೆಕ್ನಿಕ್ಸ್ (ಎಸ್ಇಆರ್ಎಸ್) (ಎಲ್ಇಡಿ-ಇಂಡ್ಯೂಸ್ಡ್ ಫ್ಲೋರೊಸೆನ್ಸ್ ((HPLC-LED-IF)) ಮತ್ತು  ರ್ಫನ್ಸ್ ರ್ಧಿತ ರಾಮನ್ ಸ್ಪೆಕ್ಟಿಯೋಸ್ಕೋಪಿಕ್ ಟೆಕ್ನಿಕ್ಸ್ (SERS) ನೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯ ಲಿಕ್ವಿಡ್ ಕ್ರೊಮ್ಯಾಟೋಗ್ರಫಿಯನ್ನು ಬಳಸಿಕೊಂಡು ಮಾನವ ಕಣ್ಣೀರಿನ ಮಾದರಿ ಅಧ್ಯಯನಗಳು)  ಎಂಬ  ವಿಷಯದ ಮೇಲಿನ ಅಧ್ಯಯನ ಹಾಗೂ ಪ್ರಬಂಧಕ್ಕೆ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.

ಇವರು ಫಿಸಿಕ್ಸ್ನಲ್ಲಿ ಎಂ.ಎಸ್ಸಿ. ಅಧ್ಯಯನ ಮಾಡಿದ್ದು, ಮುರ್ಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವರಾಮ ಅಡಿಗಳ್ ಹಾಗೂ ಗಾಯತ್ರಿ ಅಡಿಗಳ್ ಅವರ ಪುತ್ರಿಯಾಗಿದ್ದಾರೆ.


Share: