ಭಟ್ಕಳ, ಜನವರಿ 1: ನಗರದ ಮುಖ್ಯ ರಸ್ತೆಯಲ್ಲಿರುವ ಮಾರಿಕಾಂಬ ಮಂದಿರದ ಪುಜಾರಿಯು ಮಂದಿರದಲ್ಲಿ ಅಧಾರ್ಮಿಕ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಆರೋಪಿಸಿದೆ. ಈ ಕುರಿತು ಶ್ರೀರಾಮ ಸೇನೆಯು ಮಾರಿಕಾಂಬ ಮಂದಿರದ ಆಡಳಿತಮಂಡಳಿಗೆ ಪುಜಾರಿ ವಿರುದ್ದ ದೂರನ್ನು ನೀಡಿದ್ದು ಈತನ ಆಧಾರ್ಮಿಕ ಕಾರ್ಯವು ದಿನೆ ದಿನೆ ಉಗ್ರ ಸ್ವರೂಪ ಪಡೆಯುತ್ತಿದ್ದು ಕೂಡಲೆ ಈತನನ್ನು ತೆಗೆದು ಹಾಕದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಅದು ದೂರಿನಲ್ಲಿ ಎಚ್ಚರಿಸಿದೆ.
ಕಳೆದ ಎರಡು ವರ್ಷಗಳಿಂದ ಇಲ್ಲಿ ಅಧಾರ್ಮಿಕ ಕ್ರಿಯೆಗಳು ಜರುಗುತ್ತಿದ್ದು ಇದು ಅತ್ಯಂತ ಹಿನಾಯವಾಗಿದೆ. ಇಲ್ಲಿನ ಪುಜಾರಿ ರಾಘವೇಂದ್ರ ಹೆಗಡೆ ಎಂಬಾತನು ಮಂದಿರಕ್ಕೆ ಬರುವ ಭಕ್ತರನ್ನು ಕಾಣಿಕೆ ನೀಡುವಂತೆ ಒತ್ತಾಯಿಸುತ್ತಾನೆ ಎನ್ನಲಾಗಿದ್ದು ಯಾರು ಕಾಣಿಕೆ ನೀಡುವುದಿಲ್ಲವೂ ಅವರನ್ನು ಭ್ರಹ್ಮ ಶಾಪ ನೀಡುತ್ತಾನೆ ಎಂದು ಹೆದರಿಸುತ್ತಾನೆ ಎನ್ನಲಾಗಿದೆ. ಅಲ್ಲದೆ ಕಾಣಿಕೆ ನೀಡದ ಭಕ್ತರಿಗೆ ಪ್ರಸಾದವನ್ನು ನೀಡದೆ ಹಾಗೆಯೆ ಕಳಿಸುತ್ತಾನೆ ಎಂದು ದೂರಲಾಗಿದೆ. ಅಲ್ಲದೆ ಪುಜಾರಿಯು ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದು ಕೆಳಜಾತಿಯ ಭಕ್ತರೊಂದರಿಗೆ ಬೇರೆಯೆ ರೀತಿಯಲ್ಲಿ ನಡೆದುಕೊಳ್ಳುತ್ತಾನೆ. ಆದ್ದರಿಂದ ಇಂತಹ ಅಧಾರ್ಮಿಕ ಪುಜಾರಿಯನ್ನು ಕಿತ್ತೊಗೆದು ಮಂದಿರದ iರ್ಯಾದೆಯನ್ನು ಕಾಪಾಡಬೇಕೆಂದು ರಾಮಸೇನೆಯು ಆಡಳಿತಮಂಡಳಿಯನ್ನು ಒತ್ತಾಯಿಸಿದೆ.
ವರದಿ: ಸಾಹಿಲ್‌ಆನ್‌ಲಾಯಿನ್