ಭಟ್ಕಳ, ಅಕ್ಟೋಬರ್ ೨೧: ತಾಲೂಕಿನ ಮಾರುಕೇರಿ ಗ್ರಾಮಪಂಚಾಯತ ಕಾರ್ಯದರ್ಶಿ ರಾಮಚಂದ್ರ ಗೋವಿಂದ ಖಾರ್ವಿಯವರ ಮೇಲೆ ಅಧ್ಯಕ್ಷೆ ನಿರ್ಮಲಾ ಮೊಗೇರ ಹಲ್ಲೆ ನಡೆಸಿರುವುದನ್ನು ಭಟ್ಕಳ ತಾಲೂಕು ಕಾರ್ಮಿಕ ಸಂಘ ಖಂಡಿಸಿದೆ.
ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕಾಗಿದ್ದು, ಪಂಚಾಯತ ಅಧ್ಯಕ್ಷರು ಕಾನೂನು ಕೈಗೆತ್ತಿಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಕಾರ್ಯದರ್ಶಿಯವರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.