ಭಾಷಾ ಮಾಧ್ಯಮ ವಿವಾದಕ್ಕೆ ಸಂಬಂಧಿಸಿದಂತೆ
ನ್ಯಾಯಾಂಗ ನಿಂದನೆ ಎಸಗಿಲ್ಲ ಎಂದು ಸಚಿವ ವಿಶ್ವೇಶ್ವರ
ಹೆಗಡೆ ಕಾಗೇರಿ ಹೈಕೋರ್ಟ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ಎನ್.ಎಸ್.ಖಾನ್ ಎಂಬುವರು ಸಲ್ಲಿಸಿದ ನಿಂದನಾ
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎನ್.ಕೆ.ಪಾಟೀಲ್
ಅವರ ವಿಭಾಗೀಯ ಪೀಠಕ್ಕೆ ಈ ಹೇಳಿಕೆ ಸಲ್ಲಿಸಲಾಗಿದೆ.
ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್
ಪೂರ್ಣ ಪೀಠದ ಆದೇಶವಿದ್ದರೂ ಸರಕಾರ ಅನುಮತಿ
ನೀಡುತ್ತಿಲ್ಲ. ಇದಲ್ಲದೆ ಈ ಆದೇಶದ ವಿರುದ್ಧ ಸುಪ್ರೀಂ
ಕೋರ್ಟ್ನಲ್ಲಿ ಸರಕಾರ ಸಲ್ಲಿಸಿರುವ ಮೇಲ್ಮನವಿ
ವಿಚಾರಣಾ ಹಂತದಲ್ಲಿರುವಾಗ ನೀಡಿದ ದ್ವಂದ್ವ ಹೇಳಿಕೆ
ಯಿಂದ ಗೊಂದಲ ಉಂಟಾಗಿದೆ. ಇದು ಕಾನೂನಿನ
ಉಲ್ಲಂಘನೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಭಾಷಾ ಮಾಧ್ಯಮದ ವಿಚಾರದಲ್ಲಿ ಮಾಧ್ಯಮಗಳಲ್ಲಿ
ಬಂದ ವರದಿ ಆಧರಿಸಿ ನಿಂದನಾ ಅರ್ಜಿ ಸಲ್ಲಿಸಲಾಗಿದೆ
ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಚಾರಣೆ
ಮುಂದೂಡಲಾಗಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ
ಪೀಠ, ಆದೇಶ ಪಾಲಿಸಲು ನಿರಾಕರಿಸಿರುವ ಸಚಿವರ
ವಿರುದ್ಧ ಕೈಗೊಳ್ಳಬಾರದೇಕೆ ಎಂದು ಅಭಿಪ್ರಾಯಪಟ್ಟು,
ಆರೋಪಪಟ್ಟಿ ಸಲ್ಲಿಸಲು ಡಿ.17 ರ ದಿನ ನಿಗದಿ ಪಡಿಸಿದೆ.
ಸೌಜನ್ಯ: ವಿಜಯ ಕರ್ನಾಟಕ