ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುಠ್ಠಳ್ಳಿ ಶಾಲೆಯಲ್ಲಿ ನಡೆದ ದಂತ ತಪಾಸಣೆ,ಮಾಹಿತಿ ಶಿಬಿರ

ಮುಠ್ಠಳ್ಳಿ ಶಾಲೆಯಲ್ಲಿ ನಡೆದ ದಂತ ತಪಾಸಣೆ,ಮಾಹಿತಿ ಶಿಬಿರ

Sun, 23 Jun 2024 05:47:49  Office Staff   S O News

ಭಟ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ ಹಿ ಪ್ರಾ ಶಾಲೆ ಮುಠ್ಠಳ್ಳಿ ಮತ್ತು ಸಾವಿತ್ರಿ ಸ್ಪೆಷಾಲಿಟಿ ಡೆಂಟಲ್ ಕೇರ್ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ದಂತ ತಪಾಸಣಾ ಶಿಬಿರ 
ನಡೆಯಿತು.

ಈ ಸಂದರ್ಭದಲ್ಲಿ ದಂತ ವೈದ್ಯರಾದ ರವಿ ನಾಯ್ಕ ಮಾತನಾಡಿ ಶಿಬಿರದ ಉದ್ದೇಶದ ಬಗ್ಗೆ ವಿವರಿಸಿ, ಈಗಿನ ಜೀವನ ಶೈಲಿ ಬದಲಾವಣೆಯಿಂದ ಮಕ್ಕಳು ಸಿಹಿತಿನಿಸುಗಳು, ಬೇಕರಿ ತಿನಿಸು ಮುಂತಾದ ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದರಿಂದ ಬೇಗ ಹಲ್ಲುಗಳು ಹಾಳಾಗುತ್ತಿವೆ. ಆದ್ದರಿಂದ ಈ ಶಿಬಿರದ ಮೂಲಕ ಮಕ್ಕಳಿಗೆ ಹಲ್ಲಿನ ಸ್ವಚ್ಛತೆ ಬಗ್ಗೆ ಜಾಗತಿ ಮೂಡಿಸುತ್ತಿದ್ದೇವೆ ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡಬೇಕು ಎಂದು ಪುಟ್ಟಮಕ್ಕಳಿಗೆ ಕಿವಿಮಾತು ಹೇಳಿದರು.

ಈ‌ ಸಂದರ್ಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಲ್ಲಿನ ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ಒಳಗೊಂಡ ಕಿಟಗಳನ್ನು ಏರೋಸ್ ಮೈಕ್ರೋ ಲ್ಯಾಬ್ ನ ವೈದ್ಯಕೀಯ ಪ್ರತಿನಿಧಿ ವಿತರಿಸಿದರು.
ಡಾಕ್ಟರ್ ನಮೃತಾ ನಾಯ್ಕ ಹಲ್ಲುಗಳ ಸ್ವಚ್ಛತೆಯ ಕುರಿತು ಪ್ರಾತ್ಯಕ್ಷಿಕೆಯನ್ನು ಶಾಲಾ ಮಕ್ಕಳಿಗೆ ಮಾಡಿ ತೋರಿಸಿದ್ದು,
ಡಾ: ಜಿತೇಶ್ ಮೊಗೇರ ವಿದ್ಯಾರ್ಥಿಗಳಿಗೆ ಹಲ್ಲಿನ ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿ ದಂತ ತಪಾಸಣೆಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದ ಏರೋಸ್ ಮೈಕ್ರೋ ಲ್ಯಾಬ್ ವೈದ್ಯರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ರಜನಿ ನಾಯ್ಕ    ಎಸ್ ಡಿ ಎಂ ಸಿ ಅಧ್ಯಕ್ಷ ಅನಂತ ನಾಯ್ಕ, ಪಂಚಾಯತ್ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ್,ಸಿ ಆರ್ ಪಿ ಜಯಶ್ರೀ ಆಚಾರಿ,ಶಾಲಾ ಮುಖ್ಯ ಉಪಾಧ್ಯಾಯರಾದ ಗಂಗಾ ಮೊಗೇರ್, ಎಸ್ ಡಿ ಎಂ ಸಿ ಸದಸ್ಯರು ಸೇರಿದಂತೆ ಮಕ್ಕಳ  ಪಾಲಕರು, ಮುಂತಾದವರು ಉಪಸ್ಥಿತಿ ಇದ್ದರು.

ಕಾರ್ಯಕ್ರಮವನ್ನು ಶಿಕ್ಷಕ ವಿಜಯಕುಮಾರ್ ನಿರೂಪಿಸಿದರು.


Share: