ತುಮಕೂರು, ಎ.೨೭: ಅಗತ್ಯವಸ್ತುಗಳ ಬೆಲೆ ಏರಿಕೆ ಮತ್ತು ಸರಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಜೆಡಿಎಸ್ ನೇತೃತ್ವದಲ್ಲಿ ಎಡ ಪಕ್ಷಗಳು ಸೇರಿದಂತೆ ೧೩ಕ್ಕೂ ಹೆಚ್ಚು ರಾಷ್ಟ್ರೀಯ ಪಕ್ಷಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಹರತಾಳಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೇಂದ್ರ ಸಮಿತಿಯ ಕರೆಯ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆಗೆ ಕಾರ್ಮಿ ಕರು, ನೌಕರರು ಹಾಗೂ ವಿವಿಧ ರಾಜ್ಯಪಕ್ಷಗಳಿಂದ ಉತ್ತಮ ಬೆಂಬಲ ದೊರೆತಿದೆ.
ಬೆಳಗ್ಗೆ ೧೦ ಗಂಟೆಗೆ ನಗರದ ಟೌನ್ಹಾಲ್ ವೃತ್ತದಲ್ಲಿ ಸೇರಿದ್ದ ನೂರಾರು ಪ್ರತಿಭಟನಕಾರರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಎಂ. ಆರ್. ಹುಲಿನಾಯ್ಕರ್, ಎಡ ಪಕ್ಷಗಳ ಮುಖಂಡರಾದ ಸೈಯದ್ ಮುಜೀಬ್, ಬಿ.ಉಮೇಶ್, ಮುಹಮ್ಮದ್ ದಸ್ತUರ್, ಕಂಬೇಗೌಡ, ಗಿರೀಶ್ ಮತ್ತು ಶಿವಣ್ಣ ನೇತೃತ್ವದಲ್ಲಿ ಐದು ನೂರಕ್ಕೂ ಹೆಚ್ಚು ಕಾರ್ಯ ಕರ್ತರು ನಗರದ ಟೌನ್ಹಾಲ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಅಲ್ಲದೆ ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ದರು. ಈ ಸಂದರ್ಭದಲ್ಲಿ ಎಚ್. ನಿಂಗಪ್ಪ ಹಾಗೂ ಹುಲಿನಾಯ್ಕರ್ ಸೇರಿದಂತೆ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಕೇಂದ್ರದಲ್ಲಿ ನಡೆದ ರೀತಿಯ ಲ್ಲಿಯೇ ಜಿಲ್ಲೆಯ ೧೦ ತಾಲೂಕು ಗಳಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಲೆ ಹೆಚ್ಚಳ ನೀತಿಯ ವಿರುದ್ಧ ಪ್ರತಿಭಟನೆ ನಡೆದಿದೆ.
ತುರುವೇಕೆರೆಯಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ, ರಸ್ತೆ ತಡೆ ನಡೆಸಿದ್ದಾರೆ. ಮಧುಗಿರಿಯಲ್ಲಿ ಸಿಪಿಎಂ ಮತ್ತು ಸಿಪಿಐ ನೇತೃತ್ವದಲ್ಲಿ ಹಲವಾರು ಕಾರ್ಮಿಕ ಸಂಘಟಗಳು ಕಾರ್ಯ ಕರ್ತರು ಪತ್ರಿಭಟನೆ ನಡೆಸಿದ್ದಾರೆ. ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಕುಣಿಗಲ್, ಶಿರಾ ಹಾಗೂ ಇತರ ತಾಲೂಕುಗಳಲ್ಲಿಯೂ ಜೆಡಿಎಸ್ ಮತ್ತು ಸಿಪಿಎಂ ಪಕ್ಷಗಳ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಹೊಸಪೇಟೆ ವರದಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೆಲೆ ಏರಿಕೆ ನೀತಿ ವಿರೋಧಿಸಿ ಅಖಿಲ ಭಾರತ ಬಂದ್ ಅಂಗವಾಗಿ ೧೩ ಪಕ್ಷಗಳು ಹಮ್ಮಿಕೊಂಡ ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಹೊಸಪೇಟೆಯಲ್ಲೂ ಬಂದ್ ಆಚರಿಸಿದ್ದು, ಬಹುತೇಕ ಯಶಸ್ವಿಯಾಗಿ ನಡೆಯಿತು.
ಶಾಲಾ-ಕಾಲೇಜುಗಳು, ರಾಷ್ಟ್ರೀಕೃತ ಬ್ಯಾಂಕ್ಗಳು, ದೂರ ಸಂಪರ್ಕ ಇಲಾಖೆ ಕಾರ್ಯನಿರ್ವಹಿಸಲಿಲ್ಲ. ಸಿನಿಮಾ ಮಂದಿರಗಳ ಪ್ರದರ್ಶನ ಗಳನ್ನು ರದ್ದುಗೊಳಿಸಲಾಗಿತ್ತು. ನಗರದ ಮೇನ್ ಬಜಾರ್ ಸೇರಿ ದಂತೆ ಎಲ್ಲಾ ಕಡೆ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಓಡಾಟ ನಿಲುಗಡೆ ನಡೆಸಿತ್ತು.
ಸಭೆಯನ್ನು ಉದ್ದೇಶಿಸಿ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ಎ.ಕರುಣಾನಿಧಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಕೊಟ್ರೇಶ್, ಬಿಎಸ್ಪಿ ತಾಲೂಕು ಅಧ್ಯಕ್ಷ ವೆಂಕಟೇಶಲು, ಲಕ್ಷ್ಮಣ ಹಾಗೂ ಸಿಪಿಎಂ ಮುಖಂಡರಾದ ಭಾಸ್ಕರ ರೆಡ್ಡಿ, ಕೆ.ನಾಗರತ್ನಮ್ಮ ಮಾತನಾಡಿದರು.
ಮಂಡ್ಯ ವರದಿ: ಬೆಲೆ ಏರಿಕೆ ವಿರೋಧಿಸಿ ಸೆಂಟರ್ ಆ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂ ವೈದ್ಯಕೀಯ ಪ್ರತಿನಿಧಿಗಳ ಸಂಘ ಮಂಗಳವಾರ ನಗರದಲ್ಲಿ ಹರತಾಳ ನಡೆಸಿದವು.
ಸಂಘಟನೆಯ ನೂರಾರು ಕಾರ್ಯ ಕರ್ತರು ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಹೊರಟು ಸಂಜಯ ವತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಿ. ರಾಮಕೃಷ್ಣ, ಮುಖಂಡರಾದ ನಾಗರಾಜು, ಜಕ್ಕನಹಳ್ಳಿ ಜಯ ರಾಮು, ಲೋಕೇಶ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಶಿವಲಿಂಗೇಗೌಡ, ವಿ. ಎಸ್. ಮೋಹನ್ಕುಮಾರ್, ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.