ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸತತ 6 ಗಂಟೆ ವಿದ್ಯುತ್ ನೀಡಲು ಸಾಧ್ಯವಿಲ್ಲ: ಸರಕಾರದ ಹೇಳಿಕೆ

ಸತತ 6 ಗಂಟೆ ವಿದ್ಯುತ್ ನೀಡಲು ಸಾಧ್ಯವಿಲ್ಲ: ಸರಕಾರದ ಹೇಳಿಕೆ

Tue, 27 Apr 2010 16:37:00  Office Staff   S.O. News Service
ಬೆಂಗಳೂರು, ಎ.೨೭: ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಸತತ ೬ ಗಂಟೆ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸರಕಾರ ಹೇಳಿಕೆ ನೀಡಿದೆ.

ಹೈಕೋರ್ಟ್‌ನ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲಿನ ನ್ಯಾಯಾಂಗ ನಿಂದನಾ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮಂಜುಳಾ ಚೆಲ್ಲೂರು ನೇತೃತ್ವದ ರಜಾ ಕಾಲದ ವಿಭಾUಯ ಪೀಠದ ಮುಂದೆ ಸರಕಾರ ಈ ಹೇಳಿಕೆ ನೀಡಿದೆ.

ರಾಜ್ಯದ ಈಗಿನ ವಿದ್ಯುತ್ ಉತ್ಪಾದನಾ ಮತ್ತು ಸಂಗ್ರಹಣ ಸಾಮಾರ್ಥ್ಯಕ್ಕನುಗುಣವಾಗಿ ಗ್ರಾಮೀಣ ಭಾಗದ ರೈತರಿಗೆ ಸತತ ೬ ಗಂಟೆ ೩ ಫೇಸ್ ವಿದ್ಯುತ್ ಪೊರೈಸಲು ಸಾಧ್ಯವಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ೩ಫೇಸ್ ವಿದ್ಯುತ್ ಪೊರೈಕೆ ಮಾಡಬಹುದು. 

ಉಳಿದಂತೆ ೬ ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಲು ಸಾಧ್ಯ ಅದನ್ನು ಈಗಾಗಲೇ ನೀಡಲಾಗುತ್ತಿದೆ. ಸದ್ಯದ ಸ್ಥಿತಿ ನಿಭಾಯಿಸಲು ಸರಕಾರಕ್ಕೆ ತುಂಬಾ ಕಷ್ಟದ ಕೆಲಸವಾಗಿದೆ. ನೆರೆ ರಾಜ್ಯಗಳಲ್ಲೂ ತೀವ್ರ ವಿದ್ಯುತ್ ಆಭಾವ ಇರುವುದರಿಂದ ವಿದ್ಯುತ್ ಖರೀದಿ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳ ಸಮರ್ಪಕವಾಗಿ ಮಳೆ ಆಗಿದ್ದರೆ ರಾಜ್ಯದಲ್ಲಿ ತೀವ್ರ ವಿದ್ಯುತ್ ಆಭಾವ ಎದುರಾಗಲಿದೆ ಎಂದು ಸರಕಾರ ಹೇಳಿದೆ.

ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ತಡೆಯಬೇಕು. ಪರೀಕ್ಷಾ ದೃಷ್ಠಿಯಿಂದ ನಿರಂತರ ವಿದ್ಯುತ್ ಪೊರೈಕೆ ಮಾಡಬೇಕು. 

ರೈತರಿಗೆ ೨ ಗಂಟೆ ಹೆಚ್ಚುವರಿ ವಿದ್ಯುತ್ ಕೊಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸದ ಹಿನ್ನಲೆಯಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಲಾಗಿದೆ. ವಿಚಾರಣೆಯನ್ನು ರಜಾ ಅವಧಿ ಮುಗಿದ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ತಿಳಿಸಿದೆ.

Share: