ಭಟ್ಕಳ,ಡಿಸೆಂಬರ್ 17:ಶುಕ್ರವಾರದಂದು ನಡೆಯುವ ಉತ್ತರಕನ್ನಡ ಜಿಲ್ಲಾ ವಿಧಾನಪರಿಷತ್ ಚುನಾವಣೆಯಲ್ಲಿ ಭಟ್ಕಳದ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರನ್ನು ಬೆಂಬಲಿಸಲಿದೆ ಎಂದು ತಂಝೀಮ್ ತಿಳಿಸಿದೆ.
ಗುರುವಾರ ಸಂಜೆ ತಂಝೀಮ್ ಕಾರ್ಯಲಯದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ತಂಝೀಮ್ ಉಪಾಧ್ಯಕ್ಷ ಡಾ.ಎಸ್.ಎಮ್.ಸೈಯ್ಯದ್ ಸಲೀಮ್ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ರ ಕೋರಿಕೆಯ ಮೆರೆಗೆ ತಂಝೀಮ್ ಈ ನಿರ್ಣಯವನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು. ಕಾಂಗ್ರೇಸ್ ಅಥವಾ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಲಿ ಅಥವಾ ಯಾವುದೆ ರಾಜಕೀಯ ಪಕ್ಷದ ವರಿಷ್ಟರಾಗಲಿ ತಂಝೀಮ್ ಸಂಸ್ಥೆಗೆ ತಮ್ಮ ಬೆಂಬಲವನ್ನು ಕೊಡಿ ಎಂದು ಕೇಳಲಿಲ್ಲ. ಆದರೆ ಅನಿಲ್ ಕುಮಾರ್ ಅವರು ಬಂದು ತಮಗೆ ಬೆಂಬಲವನ್ನು ಕೊಡಿ ಎಂದು ಕೇಳಿದರು. ತಂಝೀಮ್ ನ ರಾಜಕೀಯ ಪೆನಲ್ ಹಾಗೂ ಕಾರ್ಯಕಾರಿಣಿ ಸಮಿತಿಯು ಸಭೆ ಸೇರಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಅದರಂತೆ ಜಿಲ್ಲೆಯ ಅಭಿವೃದ್ಧಿಗಾಗಿ ಅಪಾರ ಕಾಳಜಿಯನ್ನು ಹೊಂದಿದ ಅನಿಲ ಕುಮಾರ ಅವರಿಗೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಮತವನ್ನು ನೀಡಿ ಅವರನ್ನು ವಿಧಾನಪರಿಷತ್ತಿಗೆ ಆರಿಸಿ ಕಳುಹಿಸಬೇಕೆಂದು ಅವರು ಕೋರಿಕೊಂಡರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗೈನ ದೇಶಪಾಂಡೆಯವರು ಅಲ್ಪ ಸಂಖ್ಯಾತರನ್ನು ಹಾಗೂ ಹಿಂದುಳಿದವರನ್ನು ಕಡೆಗಣಿಸಿದ್ದೆ ತಾವು ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಲು ಕಾರಣವೆಂದ ಅವರು ಕಳೆದ ಹಲವಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷವು ಮುಸ್ಲಿಮರನ್ನು ಹಾಗೂ ಇತರ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗವನ್ನು ಮತಬ್ಯಾಂಕನ್ನಾಗಿ ಬಳಸಿಕೊಂಡಿದೆ ಈಗ ಅದರ ಆಟ ನಡೆಯದು ಎಂದ ಅವರು ಅಲ್ಪ ಸಂಖ್ಯಾತರು ಈಗ ಜಾಗೃತಗೊಂಡಿದ್ದು ತಮ್ಮ ಹಿತವನ್ನು ಯಾರು ಬಯಸುತ್ತಾರೋ ಅವರನ್ನು ಅದು ಬೆಂಬಲಿಸುತ್ತದೆ. ಹಾಗಾಗಿ ಈ ಬಾರಿ ಉತ್ತರಕನ್ನಡ ಜಿಲ್ಲೆಯಿಂದ ಪಕ್ಷೇತರ ಅಭ್ಯರ್ಥಿಯನ್ನು ಅರಿಸಿ ಕಳುಹಿಸುವುದು ಅಹಿಂದ ಸಮುದಾಯದ ಗುರಿಯಾಗಿದೆ ಎಂದು ಅವರು ವಿವರಿಸಿದರು.
ಭಟ್ಕಳ ತಾಲೂಕಿನಲ್ಲಿ ಒಟ್ಟು ೩೪೧ ಮತದಾರರಿದ್ದು ತಂಝೀಮ್ ನ ಹಿಡಿತದಲ್ಲಿ ಸುಮಾರು ನೂರಕ್ಕೂ ಅಧಿಕ ಮತಗಳಿವೆ ಎನ್ನಲಾಗಿದೆ. ಆದರೆ ಎಷ್ಟರಮಟ್ಟಿಗೆ ಸದಸ್ಯರು ತಂಝೀಮ್ ನ ಈ ನಿರ್ಣಯಕ್ಕೆ ಬದ್ಧರಾಗಿ ಅನಿಲ್ ಕುಮಾರ್ ಗೆ ಮತ ಚಲಾಯಿಸುತ್ತಾರೆಂಬುದು ಕಾದು ನೋಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಪ್ರತಿರೋಧಗಳ ನಡುವೆಯೂ ಕೊನೆಯ ಘಳಿಗೆಂiiಲ್ಲಿ ಕಾಂಗೈನ ಜೆ.ಡಿ.ನಾಯ್ಕರನ್ನು ಬೆಂಬಲಿಸಿಅವರ ಗೆಲುವಿಗೆ ಕಾರಣವಾದ ತಂಝೀಮ್ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೇಷರತ್ ಬೆಂಬಲ ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ತಂಝೀಮನ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಸೈಯ್ಯದ್ ಖಾಲಿದ್, ಕಾರ್ಯದರ್ಶಿಗಳಾದ ಅಬ್ದುಲ್ ರಖೀಬ್ ಎಮ್.ಜೆ. ಎಸ್.ಎಮ್. ಸೈಯ್ಯದ್ ಜಾವಿದ್ ಬಾತಿನ್, ಎಸ್.ಎಮ್.ಸೈಯದ್ ಪರ್ವೇಝ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ, ವರದಿ: ಎಮ್ಮಾರ್ ಮಾನ್ವಿ,