ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾವಿ ತ್ಯಜಿಸಿದ ನಿತ್ಯಾನಂದನ ಅನುಯಾಯಿಗಳು

ಕಾವಿ ತ್ಯಜಿಸಿದ ನಿತ್ಯಾನಂದನ ಅನುಯಾಯಿಗಳು

Mon, 26 Apr 2010 15:42:00  Office Staff   S.O. News Service

ರಾಮನಗರ, ಏ. 26 : ಸ್ವಾಮಿ ನಿತ್ಯಾನಂದನ ನ ರಾಸಲೀಲೆ ಬಯಲಾಗುತ್ತಿದ್ದಂತೆ ಕಾವಿ, ಶ್ವೇತ ವಸ್ತ್ರ ತೊಡುತ್ತಿದ್ದ ನಿತ್ಯಾನಂದನ ಅನುಯಾಯಿಗಳೆಲ್ಲ ಕಾವಿ ಶ್ವೇತ ವಸ್ತ್ರಕ್ಕೆ ಗುಡ್‌ಬೈ ಹೇಳಿ ಕಲರ್ ಕಲರ್ ಬಟ್ಟೆಗಳನ್ನ ತೊಟ್ಟು ಹೊಸ ಗೆಟಪ್‌ ನಲ್ಲಿ ಮಿಂಚಾಡುತ್ತಿದ್ದಾರೆ. ಈ ನಡುವೆ ಮಠದ ಆವರಣದಲ್ಲಿ ಕ್ಯಾಮೆರಾ ಕಣ್ಣಾಡಿಸಿದಾಗಿ ಸ್ತ್ರೀಮಣಿಗಳ ಗೆಜ್ಜೆನಾದದ ಸದ್ದು, ತಳುಕು ಬಳುಕಿನ ನಡುಗೆ ಇಂದಿಗೂ ಕಂಡು ಬರುತ್ತಿದೆ.

ರಂಜಿತಾ ನಿತ್ಯಾನಂದ ಕಾಮಪುರಾಣ ರಾದ್ದಾಂತವಾಗುತ್ತಿದ್ದಂತೆ ಬಿಡದಿಯ ಧ್ಯಾನಪೀಠದಿಂದ ಕಾಣದಂತೆ ಮಾಯವಾಗಿದ್ದ ನಿತ್ಯಾನಂದನನ್ನು ಸಿಐಡಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಮತ್ತೆ ಬಿಡದಿಯ ನಿತ್ಯಾನಂದನ ಆಸ್ಥಾನಪೀಠಕ್ಕೆ ಸೋಮವಾರ ಕರೆತರುತ್ತಾರೆಂಬ ಸುದ್ದಿ ಹಬ್ಬಿತ್ತು. ಮಾಧ್ಯಮ ಪ್ರತಿನಿಧಿಗಳೆಲ್ಲ ನಿನ್ನೆಯಿಂದಲೇ ಬಿಡದಿಯ ನಿತ್ಯಾನಂದ ಪೀಠದ ಬಳಿ ನಿತ್ಯಾನಂದನ ಆಗಮನದ ನಿರೀಕ್ಷೆಯಲ್ಲಿದ್ದರು.

ಆದರೆ ನಿತ್ಯಾನಂದ ಮಾತ್ರ ಬಿಡದಿಯ ತನ್ನ ಕಾಮಪೀಠಕ್ಕೆ ಪಾದಸ್ಪರ್ಶ ಮಾಡಲೇ ಇಲ್ಲ. ಈ ನಡುವೆ ನಿತ್ಯಾನಂದ ಯಾವುದೇ ಕಾರ್ಯಕ್ರಮಗಳಲ್ಲಿ ಕಾವಿ ಮತ್ತು ಶ್ವೇತ ವರ್ಣದ ಬಟ್ಟೆ ತೊಟ್ಟು "ನಿತ್ಯಾನಂದ" ಜಪ ಮಾಡುತ್ತಿದ್ದ ಅನುಯಾಯಿಗಳೆಲ್ಲ ಕಲರ್.. ಕಲರ್ ಬಟ್ಟೆಗಳನ್ನ ತೊಟ್ಟು ಮಿಂಚುತ್ತಿದ್ದುದು ಮಾತ್ರ ವಿಶೇಷವಾಗಿತ್ತು. ಇಷ್ಟೆಲ್ಲಾ ರಾದ್ದಾಂತ ನಡೆದಿದ್ದರೂ ನಿತ್ಯಾನಂದನ ಅನುಯಾಯಿಗಳು ನಿತ್ಯಾನಂದನಿಗೆ ಬಹುಪರಾಖ್ ಹೇಳುವುದನ್ನು ಬಿಟ್ಟಿಲ್ಲ.

ನಿತ್ಯಾನಂದ ಪುರಾಣ ಬಯಲಾದ ಮೇಲೆ ನಿತ್ಯಾನಂದ ಪೀಠದಲ್ಲಿ ಸ್ತ್ರೀಮಣಿಗಳು ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಮತ್ತೆ ಬಣ್ಣ ಬಣ್ಣದ ಹುಡುಗಿಯರ ಗೆಜ್ಜೆನಾದ ಮತ್ತೆ ನಿತ್ಯಾನಂದ ಪೀಠದಲ್ಲಿ ಕೇಳಿಸಿದೆ. ಆದ್ದರಿಂದ ನಿತ್ಯಾನಂದ ಪೀಠದಲ್ಲಿ ಇಂದಿಗೂ ಗುಪ್ತ್ ಗುಪ್ತ್ ಆಗಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅನುಮಾನ ಮೂಡುವಂತಾಗಿದೆ.

ಈ ನಡುವೆ ಸಿಐಡಿ ಪೊಲೀಸರು ನಿತ್ಯಾನಂದ ಮತ್ತು ನಿತ್ಯಾನಂದನ ಚೇಲಾ ನಿತ್ಯಭಕ್ತಾನಂದನ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಸಿಐಡಿ ಪೊಲೀಸರ ವಿಚಾರಣೆಗೆ ಪೂರಕವಾಗಿ ನಿತ್ಯಾನಂದ ಮತ್ತು ಭಕ್ತಾನಂದ ಸ್ಪಂಧಿಸುತ್ತಿದ್ದಾರೆಂದು ಸಿ.ಐ.ಡಿ ಎಸ್.ಪಿ ಯೋಗಪ್ಪ ಹೇಳಿದ್ದಾರೆ. ಸಿಐಡಿ ಪೊಲೀಸರು ನಿತ್ಯಾನಂದನನ್ನ ಮಂಗಳವಾರ ರಾಮನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಕೃಪೆ:ದಟ್ಸ್ ಕನ್ನಡ


Share: