ಬೆಂಗಳೂರು, ಫೆ.೧೩ : ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ - ನಿರ್ಮಾಪಕ ಸಾಯಿಪ್ರಕಾಶ್ ನಗರದಲ್ಲಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಚಿತ್ರರಂಗದಲ್ಲಿನ ಸೋಲು ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣವೆನ್ನಲಾಗಿದ್ದು, ನಿದ್ರೆಮಾತ್ರೆ ಸೇವಿಸಿ ಸಾವು - ಬದುಕಿನ ನಡುವೆ ಒದ್ದಾಡುತ್ತಿದ್ದಾಗ ಅವರನ್ನು ಮಧ್ಯಾಹ್ನ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ. ತೀವ್ರ ನಿಗಾಘಟಕದಲ್ಲಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಇತ್ತೀಚೆಗೆ ತಾವು ನಿರ್ಮಿಸಿ ನಿರ್ದೇಶಿಸಿದ್ದ ದೇವರು ಕೊಟ್ಟ ತಂಗಿ ಚಿತ್ರದ ಸೋಲಿನಿಂದ ಕಂಗೆಟ್ಟಿದ್ದ ಅವರು ಬದುಕಿಗೆ ವಿದಾಯ ಹೇಳಲು ನಿರ್ಧರಿಸಿ ಇಂತಹ ದುಸ್ಸಾಹಸಕ್ಕೆ ಕೈಹಾqದ್ದರೆಂದು ಅವರ ಆಪ್ತ ಮೂಲಗಳೂ ತಿಳಿಸಿವೆ.
೭೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಸಾಯಿಪ್ರಕಾಶ್ ಅವರಿಗೆ ದೇವರು ಕೊಟ್ಟ ತಂಗಿ ಚಿತ್ರ ಭರ್ಜರಿ ಯಶಸ್ಸು ತಂದುಕೊಡುತ್ತದೆ ಎಂಬ ನಂಬಿಕೆ ಇತ್ತು. ಆ ಚಿತ್ರಕ್ಕಾಗಿ ಕೋಟ್ಯಾಂತರ ರೂ. ಹಣ ಖರ್ಚು ಮಾಡಿದ್ದರು. ಚಿತ್ರದಲ್ಲಿ ಶಿವರಾಜ್‌ಕುಮಾರ್ ಹಾಗೂ ಮೀರಾಜಾಸ್ಮಿನ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದರು.
ನಿರೀಕ್ಷಿತ ಗೆಲುವು ಬಾರದಿದ್ದರಿಂದ ಸಾಯಿಪ್ರಕಾಶ್‌ಗೆ ಹಣದ ಸಮಸ್ಯೆ ಕಾಡಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಅವರು ಇಮದು ತಮ್ಮ ನಿವಾಸದಲ್ಲಿ ನಿದ್ರೆಮಾತ್ರೆ ಸೇವಿಸಿದ್ದರು.