ಸೌಹಾರ್ದ ಕರ್ನಾಟಕದ ನಿರ್ಮಾಣಕ್ಕಾಗಿ ಎಂಬ ಧ್ಯೇಯವಾಕ್ಯದಡಿ ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಒಂದು ವೇದಿಕೆಯಡಿ ಸಂಘಟಿಸಬೇಕೆಂಬ ಉದ್ದೇಶದೊಂದಿಗೆ 2009 ರ ಕನ್ನಡ ರಾಜ್ಯೋತ್ಸವದಂದು ಉದ್ಘಾಟನೆಗೊಂಡ ವಿಶ್ವ ಕನ್ನಡಿಗರ ಒಕ್ಕೂಟದ ಸದಸ್ಯರ ಸಂಖ್ಯೆ ಸ್ಥಾಪನೆಯಾದ ಎರಡು ತಿಂಗಳಲ್ಲೇ ಸಾವಿರದ ಗಡಿಯತ್ತ ಮುನ್ನುಗ್ಗುತ್ತಿರುವುದು ಈ ಒಕ್ಕೂಟದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಸೌದಿ ಅರೇಬಿಯಾದಲ್ಲಿರುವ ಅಶ್ರಫ್ ಮಂಜ್ರಾಬಾದ್, ಸಕಲೇಶಪುರ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ದುಬೈನಲ್ಲಿರುವ ಅಬ್ದುಲ್ ಹಮೀದ್. ಸಿ.ಹೆಚ್. ಪುತ್ತೂರು ಎಂಬ ಇಬ್ಬರು ಅನಿವಾಸಿ ಕನ್ನಡಿಗರ ನೇತೃತ್ವದಲ್ಲಿ ಸ್ಥಾಪನೆಯಾದ ಈ ಒಕ್ಕೂಟ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಭಾವೈಕ್ಯತೆಯನ್ನೂ ಎತ್ತಿ ಹಿಡಿಯುತ್ತಿದೆ. ವಿದೇಶಗಳಲ್ಲಿದ್ದುಕೊಂಡು ಮಾತೃಭಾಷೆಯ ಸಂಪರ್ಕದಿಂದ ದೂರ ಇರುವ ಕನ್ನಡಿಗರನ್ನು ಒಂದು ವೇದಿಕೆಯಡಿ ತಂದು ಅವರಲ್ಲಿರುವ ಪ್ರತಿಭೆಗಳನ್ನು ಪ್ರಕಟಿಸುವಂತಾಗಳು ಮತ್ತು ಅವರಲ್ಲಿ ತಾಯ್ನಾಡಿನ ಭಾಷೆ ಮತ್ತು ನೆಲದ ಬಗ್ಗೆ ಅಭಿಮಾನ ಉಂಟುಮಾಡುವಂತಾಗಲು ಈ ವೇದಿಕೆ ನಿರಂತರ ಶ್ರಮಿಸುತ್ತಿದೆ. ಇದುವೇ ಈ ಸಂಘಟನೆಯ ಮೂಲ ಉದ್ದೇಶವೂ ಕೂಡ ಆಗಿದೆ ಎಂದು ಹೇಳುತ್ತಾರೆ ಈ ತಾಣದ ಸ್ಥಾಪಕರು.
ಈ ತಾಣದಲ್ಲಿ ಕನ್ನಡ ನಾಡಿನ ಅನೇಕ ಮಹನೀಯರುಗಳ ಲೇಖನಗಳ ಜೊತೆಗೆ ಯುವ ಬರಹಗಾರ ಲೇಖನಗಳೂ ಇವೆ. ಅದೂ ಅಲ್ಲದೆ ಕನ್ನಡ ನಾಡಿನ ಪ್ರಸಿದ್ದ ಸುದ್ಧಿ ಮಾಧ್ಯಮಗಳ ಕೊಂಡಿಗಳ ಜೊತೆಗೆ ರಾಷ್ಟ್ರ ಮಟ್ಟದ ಆಂಗ್ಲ ಭಾಷೆಯ ಪತ್ರಿಕೆಗಳ ಕೊಂಡಿಯನ್ನೂ ಸೇರಿಸಲಾಗಿದೆ. ಜೊತೆಗೆ ರಕ್ತದಾನಿಗಳ ಕುರಿತ ಮಾಹಿತಿ, ಚಿನ್ನದ ದರ, ವಿನಿಮಯ ದರ, ಕನ್ನಡ ಅಂತರ್ಜಾಲ ಟೈಪಿಂಗ್ ಗಳ ಕೊಂಡಿಯನ್ನೂ ಸೇರಿಸಲಾಗಿದೆ. ಈಗಾಗಲೇ 270 ಕ್ಕಿಂತಲೂ ಹೆಚ್ಚು ಲೇಖನಗಳು, 1000ಕ್ಕಿಂತಲೂ ಹೆಚ್ಚು ಛಾಯಾಚಿತ್ರಗಳು , 190 ಕ್ಕಿಂತಲೂ ಹೆಚ್ಚು ವಿಡಿಯೋಗಳನ್ನು ಒಳಗೊಂಡಿರುವ ಈ ತಾಣ ಕನ್ನಡ ಸಾಹಿತ್ಯ ಪ್ರಿಯರ ನೆಚ್ಚಿನ ತಾಣವಾಗಿದೆ. ಪ್ರತಿಕ್ಷಣವೂ ನುರಿತ ತಂತ್ರಜ್ಞರಿಂದ ನಿರ್ವಹಿಸಲ್ಪಡುತ್ತಿರುವ ವಿಶ್ವ ಕನ್ನಡಿಗರ ಒಕ್ಕೂಟ ತನ್ನ ಜನಪ್ರಿಯತೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ.
ತಾವು ಸಹ ಈ ಒಕ್ಕೂಟದ ಸದಸ್ಯರಾಗಲು http://www.vishwakannadigas.ning.com ಗೆ ಭೇಟಿ ಕೊಡಿ..