ಭಟ್ಕಳ, ಮಾರ್ಚ್ 4; ಸರಕಾರವು ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ವಿಧೇಯಕವನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಒತ್ತಾಯಿಸಿ ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹಾಯಕ ಕಮೀಷನರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು.
ಬುಧವಾರ ಸಂಜೆ ಇಲ್ಲಿನ ಸಹಾಯಕ ಕಮೀಷನರ ಕಚೇರಿಗೆ ತೆರಳಿದ ತಂಝೀಮ್ ಸಂಸ್ಥೆಯ ನಿಯೋಗವು ಸರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಾಡುವುದರಿಂದ ರೈತರು, ಗೋವು ವ್ಯಾಪಾರಿಗಳು ಹಾಗೂ ಗೋಮಾಂಸ ಮಾರಾಟಗಾರರು ತೊಂದರೆಯಾಗುತ್ತದೆ. ಮಾಂಸ ಸೇವನೆಯು ಆಹಾರದ ಹಕ್ಕಾಗಿದ್ದು ಇದನ್ನು ಕಸಿದುಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ತಂಝಿಮ್ ನಮ್ಮ ರಾಜ್ಯದಿಂದ ವಿದೇಶಕ್ಕೆ ಗೋ ಮಾಂಸ ರಪ್ತಾಗುತ್ತಿದ್ದು, ಇದರಿಂದ ವಿದೇಶಿ ವಿನಿಮಯ ಸಹ ದೊರೆಯುತ್ತಿದೆ. ಗೋ ಹತ್ಯಾ ಕಾನೂನು ಜಾರಿಗೆ ತರುವುದರಿಂದ ರಾಜ್ಯದಲ್ಲಿ ಅಸಂಖ್ಯಾತ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ನಿಷೇಧದಿಂದ ಆರ್ಥಿಹ ಹಿನ್ನಡೆಯನ್ನೂ ಸಹ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ. ಮನವಿ ಸ್ವೀಕರಿಸಿದ ಸಹಾಯಕ ಕಮೀಷನರ ಡಾ. ಕೆ ವಿ ತ್ರಿಲೋಕಚಂದ್ರ ಮನವಿ ಪ್ರತಿಯನ್ನು ಮುಖ್ಯಮಂತ್ರಿಯವರಿಗೆ ಕಳುಹಿಸುವ ಭರವಸೆ ನೀಡಿದರು. ನಿಯೋಗದಲ್ಲಿ ಅಧ್ಯಕ್ಷ ಡಾ. ಬದ್ರುಲ ಹಸನ್ ಮುಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಎಸ್ ಜೆ ಖಾಲೀದ್, ಡಾ.ಸಲೀಂ, ಅಬ್ದುಲ್ ರಖೀಬ್ ಎಮ್.ಜೆ. ಇದ್ದರು.