ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಗೆ ಹಫ್ತಾ ವಸೂಲಿ ಹಣ ಹಂಚುತ್ತಿದ್ದ ಆರೋಪದಲ್ಲಿ ಶ್ರೀರಾಮಸೇನೆ ರಾಜ್ಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹಾಗೂ ಸಹ ಸಂಚಾಲಕ ಪ್ರಸಾದ್ ಅತ್ತಾವರ ಅವರನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ದ.ಕ.ಎಸ್ಪಿ ವಿಶೇಷ ಪತ್ತೆದಳ ಪೊಲೀಸರು ಕದ್ರಿಯಲ್ಲಿ ಇವರಿಬ್ಬರನ್ನು ಬಂಧಿಸಿದ್ದು, ಪ್ರಸಾದ್ ಅತ್ತಾವರಗೆ ಆಶ್ರಯ ನೀಡಿದ ಆರೋಪದಲ್ಲಿ ರಾಮ ಎಂಬಾತನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಗಳೂರು: ಹಫ್ತಾ ನೀಡಲು ನಿರಾಕರಿಸಿದ ಉದ್ಯಮಿಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಏಳು ಮಂದಿ ರವಿ ಪೂಜಾರಿ ಸಹಚರರನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.
ಬಂಧಿತರಿಗೆ ಹಣ ಪೂರೈಸುತ್ತಿದ್ದ ಆರೋಪದಲ್ಲಿ ಪ್ರಸಾದ್‌ನನ್ನು ಬಂಧಿಸಲಾಗಿದ್ದು, ಈತ ಕೂಡಾ ಹತ್ಯೆ ಸಂಚು ರೂಪಿಸಿದವರಲ್ಲಿ ಒಬ್ಬ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.ಪ್ರಸಾದ್ ಅತ್ತಾವರ ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ಪ್ರಧಾನ ಸೂತ್ರಧಾರಿ ಎಂದು ಗುರುತಿಸಿಕೊಂಡಿದ್ದ.
ವಾರದ ಹಿಂದೆ ರವಿ ಪೂಜಾರಿಯ 9 ಮಂದಿ ಸಹಚರರನ್ನು ಜಿಲ್ಲಾ ಅಪರಾಧ ಪತ್ತೆದಳ ಪೊಲೀ ಸರು ಬಂಧಿಸಿದ್ದರು. ಅವರಿಂದ ಸೊತ್ತುಗಳನ್ನು ವಶಪಡಿಸಲಾಗಿತ್ತು. ಬಂಧಿತರ ಪೈಕಿ ಅವಿಲ್ ಕೋಲೋ ಹಾಗೂ ದಿನೇಶ್ ಪೊಲೀಸ್ ವಿಚಾರಣೆ ವೇಳೆ ಅರುಣ್ ಕುಮಾರ್ ಪುತ್ತಿಲ ಮತ್ತುಪ್ರಸಾದ್ ಅತ್ತಾವರ ಸೇರಿ ರವಿ ಪೂಜಾರಿ ನೀಡಿದ ಹಣವನ್ನು ಇತರರಿಗೆ ಹಂಚಿಕೆ ಮಡುತ್ತಿದ್ದರು ಎಂದು ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ. ಇದ ರೊಂದಿಗೆ ಬಂಧಿತ ರವಿ ಪೂಜಾರಿ ಸಹಚರರ ಸಂಖ್ಯೆ 11ಕ್ಕೇರಿದೆ. ಬಂಧಿತರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದ.ಕ. ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಪುತ್ತಿಲ ಬಂಧನ:
ಪುತ್ತೂರಿನಲ್ಲಿ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಗಾಂಧಿ ಪ್ರತಿಮೆಗೆ ಕಳೆದ ಫೆ. 23ರಂದು ಚಪ್ಪಲಿ ಹಾರ ಹಾಕಿದ ಆರೋಪದಲ್ಲಿ ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ಸಂಚಾಲಕ ಅರುಣ್ ಪುತ್ತಿಲನನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿದರು.
ಚಿತ್ರಕೃಪೆ: ಮ್ಯಾಂಗಲೋರಿಯನ್