ಸಕಲೇಶಪುರ, ಫೆಬ್ರವರಿ ೨೦ :ಯಾವುದೇ ಧರ್ಮವು ದ್ವೇಷ, ಅಸಮಾನತೆ ಬೋಧಿಸುವುದಿಲ್ಲ. ಅಸಮಾನತೆ ಬೋಧಿಸುವಂತದ್ದು ನೈಜ ಧರ್ಮವಾಗಲಾರದು, ಎಸ್.ಎಸ್.ಎಫ್. ಮಾಜಿ ರಾಜ್ಯಾಧ್ಯಕ್ಷ ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಜರುಗಿದ ೪೫ನೇ ಉರೂಸ್ ಸಮಾರಂಭ ಅಂಗವಾಗಿ ಜರುಗಿದ ಸೌಹಾರ್ದತಾ ಸಮಾವೇಶದ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡುತ್ತಾ,ಸೃಷ್ಠಿಕರ್ತನು ಮನುಷ್ಯರನ್ನು ವಿವಿಧ ಕುಲ, ಗೋತ್ರ, ಭಾಷೆಗಳಲ್ಲಿ ವಿಂಗಡಿಸಿರುವುದು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲಿಕ್ಕಾಗಿದೆ. ಇತರೆ ಧರ್ಮಗಳಲ್ಲಿನ ವಿಭಿನ್ನ ಆಚಾರ, ವಿಚಾರಗಳ ವೈವಿದ್ಯತೆಯನ್ನು ಬೆಂಬಲಿಸುವುದು ಉದಾತ್ತ ಮನೋಭಾವದ ಸಂಕೇತವೆಂದು ಹೇಳಿದರು.
ಪ್ರಸ್ತುತ ಮನುಷ್ಯನ ಮನಸ್ಸು ಎಷ್ಟು ಕಠಿಣವಾಗಿದೆಯೆಂದರೆ ತನ್ನ ಮನೆಯ ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರ ಬಗ್ಗೆ ಏನೊಂದು ತಿಳಿದುಕೊಳ್ಳಲೂ ಮುಂದಾಗುತ್ತಿಲ್ಲ. ಇದು ನಮ್ಮೊಳಗಿನ ಮಾನವತೆ, ಅಂತಃಕರಣ ನಾಶವಾಗಿರುವುದಕ್ಕೆ ಸಾಕ್ಷಿಯೆಂದರು.
ಶಾಸಕ ಹಾಗೂ ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಪ್ರತೀವರ್ಷ ಲಕ್ಷಾಂತರ ಮಂದಿ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಸಂಶೋಧನೆಯಲ್ಲಿ ಡಾಕ್ಟರೇಟ್ ಪದವೀಧರರು ಹೊರಹೊಮ್ಮುತ್ತಾರೆ. ಆದರೆ ಇದುವರೆಗೂ ಮಾನವೀಯತೆ ಬಗ್ಗೆ ಯಾವುದೇ ಸಂಶೋಧನೆ ಮಾಡಲು ಯಾರೂ ಮುಂದಾಗುತ್ತಿಲ್ಲ. ಮಾನವಿಯತೆಗೆ ವಿರುದ್ಧವಾದ ದುಷ್ಟಶಕ್ತಿಗಳನ್ನು ಸಮಾಜದಲ್ಲಿ ಸಂಪೂರ್ಣವಾಗಿ ಭಹಿಷ್ಕರಿಸಬೇಕೆಂದರು.
ಇಸ್ಲಾಂ ಧರ್ಮವು ಎಲ್ಲಾ ವಿಷಯಗಳಲ್ಲಿ ಇತರೇಧರ್ಮಗಳಿಗೆ ಮೇಲ್ಪಂಕ್ತಿಯನ್ನು ನೀಡುವ ಮಾದರಿ ಧರ್ಮವಾಗಿರುತ್ತದೆ ಎಂದು ಸಕಲೇಶಪುರಸೌಹಾರ್ಧತಾ ಹಾಗೂ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್. ಜಿಲ್ಲಾ ಗೌರವಾಧ್ಯಕ್ಷ ಎ.ಹೆಚ್. ಅಬೂಬಕರ್ ಹಾಜಿ ವಡ್ಡರಹಳ್ಳಿ ವಹಿಸಿದ್ದರು. ಪುರಸಭಾ ಅಧ್ಯಕ್ಷ ಎಸ್.ಎ. ಇಬ್ರಾಹಿಂ ಯಾದ್ಗಾರ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು, ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಬೂಬ್, ಪುರಸಭಾ ಅಧ್ಯಕ್ಷ ಎಸ್.ಎ. ಇಬ್ರಾಹೀಂ ಯಾದ್ಗಾರ್, ಸದಸ್ಯರಾದ ಜೈಭೀಮ್ ಮಂಜುನಾಥ್, ವೀರಶೈವ ಯುವ ವೇದಿಕೆಯ ಅಧ್ಯಕ್ಷ ಸ.ಸು.ವಿಶ್ವನಾಥ್, ಮತ್ತಿತರರು ಮಾತನಾಡಿದರು. ಬಿ.ಜೆ.ಎಂ. ಖತೀಬ್ ಬಶೀರ್ ಸಅದಿ ಅಲ್ಅಫ್ಳಲಿ ಉದ್ಘಾಟಿಸಿದರು.
ನಂತರ ನಡೆದ ಆಧ್ಯಾತ್ಮಿಕ ಹಾಗೂ ಪ್ರಾರ್ಥನಾ ಕಾರ್ಯಕ್ರಮದ ನೇತೃತ್ವವನ್ನು ಲಕ್ಷ ದ್ವೀಪ ಮೂಲದ ಸೈಯ್ಯದ್ ಝ್ಯನುಲ್ ಆಬಿದೀನ್ ಕೂರಿಕುಯಿ ತಂಙಳ್ ತ್ರಿಶೂರ್ ರವರು ವಹಿಸಿ ಸುಧೀರ್ಘ ದಾರ್ಮಿಕ ಉದ್ಭೋದನೆ ಹಾಗೂ ಪ್ರಾರ್ಥನಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.
೨ ದಿನಗಳ ಕಾರ್ಯಕ್ರಮದ ಅಂಗವಾಗಿ ಜರುಗಿದ ಮೊದಲ ದಿನದ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಬಿ.ಎಂ. ಉಮರ್ ಮುಸ್ಲಿಯಾರ್ ನೆಲ್ಯಾಡಿ ನೆರವೇರಿಸಿಕೊಟ್ಟರು.
ಎಸ್.ಎಸ್.ಎಫ್. ರಾಜ್ಯ ಜೊತೆ ಕಾರ್ಯದರ್ಶಿ ಕೆ.ಎ. ಹಸೈನಾರ್ ಆನೇಮಹಲ್ ಸ್ವಾಗತಿಸಿ, ವಂದಿಸಿದರು.
ವೇದಿಕೆಯಲ್ಲಿ ಎಸ್.ಎಸ್.ಎಫ್. ಮಾಜಿ ರಾಜ್ಯ ಉಪಾಧ್ಯಕ್ಷ ಕೆ.ಕೆ.ಎಂ. ಖಾಮೀಲ್ ಸಖಾಫಿ, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಪಿ.ಎಂ.ಎಸ್. ಅಲವಿ ಸಖಾಫಿ, ಎಸ್.ಎಸ್.ಎಫ್.ಜಿಲ್ಲಾ ಉಪಾಧ್ಯಕ್ಷ ಎಂ.ಎ. ಇಬ್ರಾಹೀಂ ಪಾಳ್ಯ, ಬಿ.ಜೆ.ಎಂ. ಅಧ್ಯಕ್ಷ ಝಾಕೀರ್ ಹುಸೈನ್ ಯಾದ್ಗಾರ್, ಸದರ್ ಅಬ್ದುಲ್ ಅಝೀಝ್ ಅಮ್ಜದಿ, ಬೇಲೂರು ತಾ.ಪಂ. ಮಾಜಿ ಅಧ್ಯಕ್ಷ ಅಬ್ದುಸ್ಸಮ್ಮದ್ ಮುಮ್ತಾಝ್ ಅರೇಹಳ್ಳಿ, ಬಿ.ಎಂ. ರಶೀದ್ ಆನೇಮಹಲ್, ರೇಣುಕಾ ಪ್ರಸಾದ್, ಗಿರೀಶ್, ಜೆ.ಎಸ್.ಮಹಮ್ಮದ್ ಅಲಿ ಕುಡುಗರಹಳ್ಳಿ, ಕೆ.ಎಂ. ಉಮರ್ ಕುಡುಗರಹಳ್ಳಿ, ಶೌಕತಲಿ ಮುಸ್ಲಿಯಾರ್ ಗುಲಗಳಲೆ, ಸಿದ್ದೀಖ್ ಲತೀಫಿ, ಶಾಮೀರ್ ಸುಂಡೆಕೆರೆ, ಅಬ್ದುಲ್ಲಾ ಕುನ್ಞಿ ಹಲಸುಲಿಗೆ, ಅಬ್ಬಾಸ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.