ಮಂಗಳೂರು ಏಪ್ರಿಲ್ ೧೫: (ಕರ್ನಾಟಕ ವಾರ್ತೆ)- ಮಂಗಳೂರು ಲೋಕಾಯುಕ್ತ ವಿಭಾಗದ ಪೋಲೀಸ್ ಆಧೀಕ್ಷಕರು, ಪೋಲೀಸ್ ಉಪಾಧೀಕ್ಷಕರು ಹಾಗೂ ಪೋಲೀಸ್ ನಿರೀಕ್ಷಕರು ಸಾರ್ವಜನಿಕರಿಂದ ಕೆಳಕಂಡ ಪ್ರದೇಶಗಳಲ್ಲಿ ನಿಗಧಿತ ದಿನಗಳಂದು ದೂರುಗಳನ್ನು ಸ್ವೀಕರಿಸಲಿರುವರೆಂದು ಪೋಲೀಸ್ ನಿರೀಕ್ಷಕ ಉದಯ ಎಂ.ನಾಯಕ್‌ರವರು ತಿಳಿಸಿದ್ದಾರೆ.
ಸುಳ್ಯದ ನಿರೀಕ್ಷಣ ಮಂದಿರದಲ್ಲಿ (ಐ ಬಿ) ೨೧-೪-೧೦ ರಂದು ಪೂರ್ವಾಹ್ನ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ , ಪುತ್ತೂರು ತಾಲೂಕಿನ ನಿರೀಕ್ಷಣಾ ಮಂದಿರದಲ್ಲಿ ೨೧-೪-೧೦ ರಂದು ರಂದು ಮಧ್ಯಾಹ್ನ ೩ ರಿಂದ ಸಂಜೆ ೪.೩೦ ರವರೆಗೆ , ಬೆಳ್ತಂಗಡಿ ತಾಲೂಕಿನ ನಿರೀಕ್ಷಣಾ ಮಂದಿರದಲ್ಲಿ ೨೩-೪-೧೦ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ, ಬಂಟ್ವಾಳ ತಾಲೂಕಿನ ನಿರೀಕ್ಷಣಾ ಮಂದಿರದಲಿ ೨೩-೪-೧೦ ರಂದು ಮಧ್ಯಾಹ್ನ ೩.೦೦ ರಿಂದ ಸಂಜೆ ೪.೩೦ ರವರೆಗೆ, ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮ ಪಂಚಾ ಯತ್‌ನಲ್ಲಿ ೨೬-೪-೧೦ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ. ಇದಲ್ಲದೆ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಾರ್ವಜನಿಕರು ಪೋಲೀಸ್ ಅಧೀಕ್ಷಕರ ಕಛೇರಿ ೦೮೨೪-೨೪೨೯೧೯೭ ,ಪೊಲೀಸ್ ಉಪಾಧೀಕ್ಷಕರ ಕಛೇರಿ ೦೮೨೪-೨೪೪೩೪೨೦ ಪೊಲೀಸ್ ನೀರೀಕ್ಷಕರ ಕಛೇರಿ ೦೮೨೪-೨೪೨೭೨೩೭ ಇಲ್ಲಿಗೆ ದೂರು ಸಲ್ಲಿಸಬಹುದಾಗಿದೆ.