ಭಟ್ಕಳ, ಮಾರ್ಚ್ ೨: ಭಟ್ಕಳ ತಾಲ್ಲೂಕು ಮಟ್ಟದ ಕನ್ನಡ ಭಾಷಾ ಅಧಿವೇಶನವು ಇದೇ ತಿಂಗಳ ಎರಡನೇ ವಾರದಲ್ಲಿ ಪ್ರಾರಂಭವಾಗಲಿದ್ದು ಅಧಿವೇಶನದ ಪ್ರಾಧಿಕಾರ ಸಮಿತಿ ರಚಿಸಲಾಗಿದೆ. ಭಟ್ಕಳ ಎಂ.ಎಲ್.ಎ. ಶ್ರೀ ಜೆ.ಡಿ.ನಾಯ್ಕ ರವರು ಸಮಿತಿಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಭಟ್ಕಳ ಪುರಸಭಾಧ್ಯಕ್ಷ ಶ್ರೀ ಪರ್ವೇಜ್ ಕಾಶಿಂಜೀ ಹಾಗೂ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಗೌರಿ ಮೊಗೇರ ರವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಭಟ್ಕಳ ಉಪಕಮೀಶನರ್ ತರ್ಲೋಕ ಚಂದ್ರ, ಕಾರ್ಯದರ್ಶಿಯಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಆರ್. ವಿ. ಸರಾಫ್, ಹಾಗೂ ಭಟ್ಕಳ ತಹಸೀಲ್ದಾರ್ ಎಸ್.ಎಂ. ನಾಯಕ್ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಸಂಚಾಲಕರಾಗಿ ಭಟ್ಕಳ ಡಿ.ವೈ.ಎಸ್.ಪಿ ಡಾ. ವೇದಮೂರ್ತಿ ಹಾಗು ತಾಲ್ಲೂಕು ಪಂಚಾಯತ್ ಅಧಿಕಾರಿ ಉದಯ್ ನಾಯಕ್ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲಾ ಸರ್ಕಾರಿ ಕಾರ್ಮಿಕರು ಸಮಿತಿಯ ಸದಸ್ಯರಾಗಿರುವರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಎಲ್ಲಾ ರೀತಿಯ ಸಹಕಾರ ನೀಡುವಂತೆ ಡಾ. ಆರ್. ವಿ. ಸರಾಫ್ ಮನವಿ ಮಾಡಿಕೊಂಡರು.