ಸಕಲೇಶಪುರ. ಜನವರಿ 20: ಸ್ಥಳೀಯ ಪತ್ರಿಕೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆಟೋ ಚಾಲಕರ ಬಗ್ಗೆ ಅಸಂಬದ್ಧ ಹಾಗೂ ಅಶ್ಲೀಲ ಸುದ್ದಿ ಪ್ರಕಟವಾಗಿದೆ ಎಂದು ಆರೋಪಿಸಿ, ಗುರುವಾರ ಪಟ್ಟಣದಲ್ಲಿ ಆಟೋ ಚಾಲಕ ಹಾಗೂ ಮಾಲಿಕರ ಸಂಘದ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಕಳೆದ ಭಾನುವಾರ ಸ್ಥಳೀಯ ಪತ್ರಿಕೆಯಲ್ಲಿ(ಜ್ಞಾನದೀಪ) ಆಟೋ ಚಾಲಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಸುದ್ದಿ ಪ್ರಕಟಿಸಲಾಗಿದೆ ಎಂದು ದೂರಿರುವ ಆಟೋ ಚಾಲಕರ ಸಂಘದ ಕಾರ್ಯಕರ್ತರು, ಪತ್ರಿಕೆಯ ಸಂಪಾದಕ ಹಾಗೂ ವರಿದಗಾರರ ಇಂತಹ ಕೃತ್ಯವನ್ನು ಖಂಡಿಸಿ ಗುರುವಾರ(ಬೆಳಗ್ಗೆ ೬ ರಿಂದ ಸಂಜೆ ೬) ಇಡೀ ದಿನ ಯಾವುದೇ ಆಟೋ ರಿಕ್ಷಗಳನ್ನು ಸಾರ್ವಜನಿಕರ ಸೇವೆಗೆ ಚಾಲನೆ ಮಾಡದೆ ಪ್ರತಿಭಟಿಸಲಾಗುವುದು ಎಂದು ಆಟೋ ಚಾಲಕ ಹಾಗೂ ಮಾಲಿಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.