ಚಿಕ್ಕಮಗಳೂರು, ಡಿ.೩- ಸಂವಿದಾನದ ಜಾತ್ಯಾತೀತ ಆಶಯಗಳಿಗೆ ಬೆಲೆ ನೀಡದೆ ಮನು ಸಿದ್ದಾಂತವನ್ನು ಅನುಸರಿಸುತ್ತಿರುವ ಬಿ.ಜೆ.ಪಿ. ಮತ್ತು ಸಂಘ ಪರಿವಾರವು ಪ್ರತಿವರ್ಷವು ನ್ಯಾಯಾಲಯದ ಆದೇಶವನ್ನು ದಿಕ್ಕರಿಸುತ್ತಿರುವುದು ಖಂಡನಾರ್ಹ. ದೇಶದ ನ್ಯಾಯಾಂಗ ವ್ಯವಸ್ಥೆ ಸಂವಿಧಾನಕ್ಕೆ ಪ್ರತಿಯೊಬ್ಬ ಭಾರತೀಯನು ತಲೆಭಾಗಲೇ ಬೇಕು. ಆದ್ದರಿಂದ ಕೋಮುವಾದವನ್ನು ಹರಡುತ್ತಿರುವ ರಾಜಕೀಯ ಪಕ್ಷ ಮತ್ತು ಅದರ ಪರಿವಾರಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಬಾಬಾಬುಡನ್ಗಿರಿಯಲ್ಲಿ ಕಾನೂನು ಉಲ್ಲಂಘಿಸಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಸುಪ್ರೀ ಕೋರ್ಟ್ ಆದೇಶವಿದ್ದರೂ ಸರಕಾರದ ಪ್ರಾಯೋಜಕತ್ವದಲ್ಲಿ ದತ್ತ ಜಯಂತಿ ಹೆಸರಿನಲ್ಲಿ ಧಾರ್ಮಿಕ ಆಚರಣೆ ನಡೆಸುತ್ತಿರುವುದನ್ನು ಪಾಪುಲರ್ ಪ್ರಂಟ್ ಆಪ್ ಇಂಡಿಯಾದ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಪೈರೋಝ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.