ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ರಾಜ್ಯದಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಸಕ್ಕರೆ ಬಿಡುಗಡೆ

ಬೆಂಗಳೂರು: ರಾಜ್ಯದಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಸಕ್ಕರೆ ಬಿಡುಗಡೆ

Mon, 15 Mar 2010 16:52:00  Office Staff   S.O. News Service

ಬೆಂಗಳೂರು,ಮಾ,೧೫,ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸುವ ಸಲುವಾಗಿ ಮಾರ್ಚ್ ಮಾಹೆಯ ಪಡಿತರ ಚೀಟಿ ಮೂಲಕ ವಿತರಿಸುವ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲಾಗಿದೆ.

 

 

ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿಗೆ ರೂ ೩.೦೦ ರಂತೆ ೨೯ ಕೆ.ಜಿ. ಅಕ್ಕಿ, ರೂ ೨.೦೦ ರಂತೆ ೬ ಕೆ.ಜಿ. ಗೋಧಿ ಹಾಗೂ ರೂ ೧೩.೫೦ ರಂತೆ ೧ ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ.

 

 

ಬಿ.ಪಿ.ಎಲ್ (ಅಕ್ಷಯ) ಪಡಿತರ ಚೀಟಿದಾರರಿಗೆ ಯೂನಿಟ್ ಒಂದಕ್ಕೆ ೪ ಕೆ.ಜಿ. ಹಾಗೂ ಗೋಧಿಗೆ ರೂ ೩.೦೦ ರಂತೆ ಹಾಗೂ ಸಕ್ಕರೆ ೧ ಕೆ.ಜಿ.ಗೆ ರೂ ೧೩.೫೦ ರಂತೆ ನೀಡಲಾಗುತ್ತದೆ.

 

ರಾಜ್ಯದ ಅನೌಪಚಾರಿಕ ಪಡಿತರ ಪ್ರದೇಶದ ಎಪಿ‌ಎಲ್ ಪಡಿತರ ಚೀಟಿದಾರರಿಗೆ ೧೦ ಕೆಜಿ ಅಕ್ಕಿ ರೂ ೧೬.೧೫ ರಿಂದ ೧೬.೪೦ ಹಾಗೂ ಗೋಧಿ ೫ ಕೆ.ಜಿ. ರೂ ೧೧.೪೫ ರಿಂದ ೧೧.೭೦.

 

ಸೀಮೆ‌ಎಣ್ಣೆಯನ್ನು ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದ ಎಲ್ಲಾ ಅನಿಲ ರಹಿತ ಪಡಿತರ ಚೀಟಿದಾರರಿಗೆ ೭ ಲೀಟರ್‌ನಂತೆ ಹಾಗೂ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳ ಅನೌಪಚಾರಿಕ ಪಡಿತರ ಪ್ರದೇಶದ ಅನಿಲ ರಹಿತ ಪಡಿತರ ಚೀಟಿದಾರರಿಗೆ ೬ ಲೀಟರ್‌ನಂತೆ, ಪಟ್ಟಣ ಪ್ರದೇಶದ ಅನಿಲ ರಹಿತ ಪಡಿತರ ಚೀಟಿದಾರರಿಗೆ ೫ ಲೀಟರ್‌ನಂತೆ ಹಾಗೂ ಗ್ರಾಮಾಂತರ ಪ್ರದೇಶದ ಅನಿಲ ರಹಿತ ಪಡಿತರ ಚೀಟಿದಾರರಿಗೆ ೩ ಲೀಟರ್‌ನಂತೆ ವಿತರಣಾ ಪ್ರಮಾಣ ನಿಗದಿಪಡಿಸಿ ರಾಜ್ಯಾದ್ಯಂತ ಸೀಮೆ‌ಎಣ್ಣೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆ ತಿಳಿಸಿದೆ.


Share: