ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ

ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ

Sat, 13 Mar 2010 18:50:00  Office Staff   S.O. News Service

ಅದು ಕನ್ನಡ ವಿಶ್ವವಿದ್ಯಾಲಯ, ಕನ್ನಡ ನಾಡುನುಡಿಗಾಗಿ ಸ್ಥಾಪಿತವಾಗಿರುವ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಕಮಲಾಪುರದ ಬಳಿ 700 ಎಕರೆ ಪ್ರದೇಶದಲ್ಲಿ 1992ರಲ್ಲಿ ಸ್ಥಾಪಿತವಾಯಿತುಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಈ ಮೊದಲು ಕನ್ನಡಿಗರು ಹೋರಾಟ ನಡೆಸಿದ್ದರು.

ಕನ್ನಡಕ್ಕೆ ಇರುವುದು ಒಂದೇ ವಿಶ್ವವಿದ್ಯಾಲಯ ಕನ್ನಡ ವಿವಿಯು ದೇಶಿ ಪರಂಪರಾ ಶೈಲಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿ,ಗಿಡಗಳನ್ನು ಬೆಳೆಸಿ ಇಡೀ ಪ್ರದೇಶವನ್ನು ಹಸಿರುಕರಣಗೊಳಿಸಿಎಲ್ಲರ ಗಮನ ಸೆಳೆಯುವುದಕ್ಕೆ ಕಾರಣವಾಯಿತುಕನ್ನಡ ವಿವಿ ಬೆಳೆದಂತೆಲ್ಲಾ 700 ಏಕರೆ ಭೂಮಿಯು ಸಾಕಾಗುವುದಿಲ್ಲಇನ್ನೂ 500 ಏಕರೆ ಭೂಮಿಯಾದರೂ ಬೇಕುನೀಡಿ ಎಂದು ಆಗೀನ ಕುಲಪತಿಗಳಾಗಿದ್ದ ಡಾಚಂದ್ರಶೇಖರ ಕಂಬಾರ ಸರ್ಕಾರಕ್ಕೆ ಮನವಿ ನೀಡಿದ್ದರುನಂತರ ಬಂದ ಸರ್ಕಾರಗಳು ಈ ಬಗ್ಗೆ ಯಾವುದೇ ಆಲೋಚನೆ ಮಾಡಲೇ ಇಲ್ಲಯುಜಿಸಿ ಅನುದಾನ ಪಡೆದುಕನ್ನಡ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿ ತನ್ನದೇ ಆದ ಶೈಕ್ಷಣಿಕ ಅಭಿವೃದ್ಧಿಗೆ ಕಾರಣವಾಯಿತುರಾಜ್ಯ ಸರ್ಕಾರವು ವರ್ಷಕ್ಕೆ ಇಂತಿಷ್ಟು ಅನುದಾನ ನೀಡುತ್ತಾ ಬಂದಿದ್ದು ಬಿಟ್ಟರೆ ಉಳಿದಂತೆ ಅಲ್ಲಿಯ ಅನೇಕ ಯೋಜನೆಗಳಿಗೆ ಸರ್ಕಾರ ಯಾವುದೇ ಸಹಾಯ ಮಾಡಿಲ್ಲಕನ್ನಡಿಗರ ಏಕೈಕ ಪ್ರತಿನಿಧಿಯಾಗಿರುವ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಸರ್ಕಾರವು ತಾತ್ಸಾರ ಭಾವನೆ ಹೊಂದಿದೆವಿವಿಧ ವಿಭಾಗಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆರಚನೆಯಾಗಿರುವ ಯಾವ ಪೀಠಗಳಿಗೂ ಸ್ವಂತಹ ಕಟ್ಟಡಗಳಿಲ್ಲಎಂ.ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಸಹ ಒಂದು ವಿಶಾಲ ಕಟ್ಟಡವಿಲ್ಲಕನ್ನಡ ವಿವಿಯು ಇಂತಹ ಹಲವಾರು ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದೆಆದರೆ ಸರ್ಕಾರಕ್ಕೆ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಯಾವುದೇ ದೂರದೃಷ್ಟಿ ಇಲ್ಲದಿರುವುದರಿಂದ ಇಂತಹ ಯಾವುದೇ ರೀತಿ ಭೌತಿಕ ವಾತಾವರಣ ನಿರ್ಮಾಣಕ್ಕೆ ಸ್ಪಂದಿಸುತ್ತಿಲ್ಲವಸ್ತು ಸ್ಥಿತಿ ಹೀಗಿರುವಾಗ ಇರುವ ಕನ್ನಡ ವಿಶ್ವವಿದ್ಯಾಲಯದಲ್ಲಿ `ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)’ ಎನ್ನುವ ಖಾಸಗಿ ಸಂಸ್ಥೆಗೆ 80 ಏಕರೆ ಭೂಮಿ ನೀಡಿದೆಭೂಮಿ ಪೂಜೆ ನಡೆಸಿಆನಂತರ ಸಿಂಡಿಕೇಟ್ ಸಭೆಯಲ್ಲಿ ಇಬ್ಬರು ಡೀನ್ಗಳು ಗೈರು ಹಾಜರಾಗುವಂತೆ ನೋಡಿಕೊಂಡು ತರಾತುರಿಯಲ್ಲಿ ಇತರೆ ವಿಷಯಗಳಲ್ಲಿ ಈ ವಿಷಯ ತಂದು ತೀರ್ಮಾನ ಕೈಗೊಳ್ಳಲಾಗಿದೆಈ ತೀರ್ಮಾನದ ಹಿಂದೆ ಸಚಿವರಗಳ ಹಸ್ತಕ್ಷೇಪ ಎದ್ದು ಕಾಣುತ್ತಿದೆ.

ವಿಜಯನಗರ ಪುನಶ್ಚೇತನ ಪ್ರತಿಷ್ಠಾನಜನಾರ್ದನ ರೆಡ್ಡಿಅರವಿಂದ ಲಿಂಬಾವಳಿ ಪ್ರಯತ್ನ ನಡೆಸಿದ್ದರುಇದರ ವಿರುದ್ಧ ನಾಡಿನಾದ್ಯಂತ ಬಂದ ಪ್ರತಿಭಟನೆ ಹಿನ್ನೆಲೆಯಲ್ಲಿ ಇದನ್ನು ಕೈಬಿಟ್ಟರುಈಗ ಹಿಂಬಾಗಿಲಿನಿಂದ ಇದನ್ನು ತರಲು ಖಾಸಗಿ ಟ್ರಸ್ಟ್ಗೆ ಕನ್ನಡ ವಿವಿಯ 80 ಏಕರೆ ಭೂಮಿ ಪರಭಾರೆ ಮಾಡುವ ಮೂಲಕ ಅಲ್ಲಿ ಕೃಷ್ಣದೇವರಾಯನ ಪ್ರತಿಮೆ ಸ್ಥಾಪನೆದೆಹಲಿ ಅಕ್ಷರಧಾಮ ಮತ್ತು ಕುರುಕ್ಷೇತ್ರದ ಮಹಾಭಾರತ ಥೀಮ್ ಪಾರ್ಕ್ ನಿರ್ಮಾಣವಿಜಯನಗರ ಕಾಲದ ವಸ್ತು ಸಂಗ್ರಹಾಲಯ,ವಿಜಯನಗರ ಜನಜೀವನವೈಭವ ನಿರೂಪಿಸುವ ಮಲ್ಟಿಮಿಡೀಯಾ ಪ್ರದರ್ಶನಪ್ರತಿಷ್ಠಾನ ಧ್ಯೇಯಕ್ಕೆ ಅನುಗುಣವಾಗು ವಂತಹ ಇತರ ಚಟುವಟಿಕೆಗಳು ನಡೆಸಲಾಗುತ್ತಿದೆ ಎಂದು ಟ್ರಸ್ಟ್ ತಿಳಿಸಿದೆಈ ಟ್ರಸ್ಟ್ ಖಾಸಗಿಯಲ್ಲಸರ್ಕಾರದ್ದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೊಸ ರಾಗ ತೆಗೆದಿದ್ದಾರೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣದೇವರಾಯ ವಿಶ್ವವಿದ್ಯಾಲಯ ಎಂಬ ಹೆಸರು ನಾಮಕರಣ ಮಾಡಲು ಸಚಿವ ಜಿ ಈ ಟ್ರಸ್ಟ್ ಕಾರ್ಯಕ್ಕೂ ಕನ್ನಡ ವಿಶ್ವವಿದ್ಯಾಲಯಕ್ಕೂ ಏನು ಸಂಬಂಧ ಈ ಟ್ರಸ್ಟ್ ಅಭಿವೃದ್ಧಿಯಾದ ನಂತರ ಈ ಟ್ರಸ್ಟ್ ಕನ್ನಡ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುತ್ತೇವೆ ಎಂದು ಹೇಳಲಾಗು ತ್ತಿದೆಕನ್ನಡ ವಿಶ್ವ ವಿದ್ಯಾಲಯದ ಕೆಲಸವೇ ಬೇರೆ ಇರಬೇಕಾದರೆ ಈ ವಸ್ತು ಪ್ರದರ್ಶನಪ್ರತಿಮೆ ತೆಗೆದುಕೊಂಡು ಇರುವ ಕೆಲಸ ಬಿಟ್ಟು ಅದನ್ನು ನಿರ್ವಹಿಸುವ ಕೆಲಸ ಮಾಡುವುದೇ ಕನ್ನಡ ವಿಶ್ವವಿದ್ಯಾಲಯದ ಉದ್ದೇಶಗಳಿಗೆ ಬಗೆದ ಅಪಚಾರವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಮೂಲ ಉದ್ದೇಶವನ್ನೇ ಸರ್ಕಾರ ಮರೆತು ಬಿಟ್ಟಿದೆಯೇ ಬಿಜೆಪಿ ಆಳುವ ಪಕ್ಷದ ರಾಜಕಾರಣಿಗಳು ಹಾಗೂ ಹೊಟೇಲ್ ಉದ್ಯಮಿಗಳು ಹಾಗೂ ಸಂಘ-ಪರಿವಾರಕ್ಕೆ ಸೇರಿದವರೇ ತುಂಬಿದ್ದಾರೆಇತಿಹಾಸದ ಹೆಸರಾಂತ ವಿದ್ವಾಂಸರಾಗಲಿತಜ್ಞರಾಗಲಿ ಸದರಿ ಟ್ರಸ್ಟ್ನಲ್ಲಿ ಇಲ್ಲಇದೊಂದು `ಹಿಡೆನ್ ಅಜೆಂಡಾ‘ ಆಗಿದೆಇದು ಕನ್ನಡ ವಿವಿಯ 80 ಏಕರೆ ಭೂಕಬಳಿಕೆ ನಡೆಸುವ ಹುನ್ನಾರ ಹೊಂದಲಾಗಿದೆಕನ್ನಡ ವಿವಿ ಯನ್ನು ವ್ಯಾಪಾರಿ ಕೇಂದ್ರವನ್ನಾಗಿ ಸುವಧಾರ್ಮಿಕ ಬ್ರಾಹ್ಮಣ ಮೌಲ್ಯಗಳ ಮತೀಯ ಕೇಂದ್ರವನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಬಲಿ ಚಕ್ರವರ್ತಿಗೆ ಒಂದು ಹೆಜ್ಜೆ ಜಾಗ ಕೇಳಿ ವಾಮನಮೂರ್ತಿ ಕೊನೆಗೆ ಯಾವ ಜಾಗವೂ ಸಾಕಾಗದೇ ಬಲಿ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿದಂತೆ ಕೇವಲ ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಭೂಮಿಯನ್ನು ಕಬಳಿಸುವ ಮೂಲಕ ಇಡೀ ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನೇ ಅಲ್ಲಿಂದ ಎತ್ತಿ ಹಾಕುವ ಹುನ್ನಾರ ಹೊಂದಿದೆ.

ಹೋರಾಟಕ್ಕೆ ಕೈ ಜೋಡಿಸಲು ಮನ

ಕನ್ನಡ ವಿಶ್ವವಿದ್ಯಾಲಯದ 80 ಏಕರೆ ಪ್ರದೇಶದ ಭೂಕಬಳಿಕೆ ವಿರುದ್ಧ ನಾಡಿನಾದ್ಯಂತ ಸಾಹಿತಿಗಳುಕಲಾವಿದರು,ಬುದ್ಧಿಜೀವಿಗಳುವಿಶ್ರಾಂತ ಕುಲಪತಿಗಳುಪ್ರಗತಿಪರ ಸಂಘಟನೆಗಳುಕನ್ನಡಪರ ಸಂಘಟನೆಗಳುದಲಿತಪರ ಸಂಘಟನೆ ಗಳು ಹಾಗೂ ರಾಜ್ಯ ರೈತ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿಪ್ರತಿಭಟನೆ ನಡೆಸುತ್ತಿವೆಹಿರೀಕರು ಮಾಡಿರುವ ಅಸ್ತಿಯನ್ನು ಉಳಿಸಿಕೊಳ್ಳಬೇಕುನಾಡು ನುಡಿಗಾಗಿ ರೂಪಿತವಾಗಿರುವ ಕನ್ನಡ ವಿವಿ ಉಳಿಸಬೇಕೆಂದು ತಮ್ಮ ಪ್ರತಿರೋಧ ದಾಖಲು ಮಾಡಿದ್ದಾರೆಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಪ್ರಗತಿಪರಕನ್ನಡಪರದಲಿತಪರರೈತಪರ ಎಲ್ಲಾ ಸಂಘಟನೆಗಳು `ಕನ್ನಡ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ‘ ರಚಿಸಿಕೊಂಡು ಹೋರಾಟ ನಡೆಸಿವೆಹೋರಾಟ ಮುಂದುವರೆಸಿವೆ.

 

-ಪರಶುರಾಮ ಕಲಾಲ್.

 -ಸೌಜನ್ಯ: ಜನಶಕ್ತಿ 

 


Share: