ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬಿಜೆಪಿ ಸರಕಾರದ ಆರೋಪ ಪಟ್ಟಿ ಶೀಘ್ರ ಬಿಡುಗಡೆ: ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರಕಾರದ ಆರೋಪ ಪಟ್ಟಿ ಶೀಘ್ರ ಬಿಡುಗಡೆ: ಸಿದ್ದರಾಮಯ್ಯ

Tue, 29 Sep 2009 03:00:00  Office Staff   S.O. News Service
ಬೆಂಗಳೂರು, ಸೆ.28: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದಾಗ ‘ಆಡಳಿತ ಪಕ್ಷದವರನ್ನು ಜನ ಬಡಿಗೆ ತೆಗೆದುಕೊಂಡು ಹೊಡೀತಾರೆ’ ಎಂದು ಹೇಳುದ್ದರು. ಈಗ ಅವರನ್ನು ಜನತೆ ಯಾವುದರಲ್ಲಿ ಹೊಡೀಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ಧಗಾರರೊಂದಿಗೆ ಮಾತನಾಡಿದ ಅವರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರತಿಪಕ್ಷದ ನಾಯಕರರಾಗಿದ್ದ ಯಡಿಯೂರಪ್ಪ ನೇತೃತ್ವದಲ್ಲಿ ಅನೇಕ ಶಾಸಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಲು ವಿಧಾನಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಬಳಿ ಅವಕಾಶ ನೀಡಲಾಗಿತ್ತು. ಇದನ್ನು ಯಡಿಯೂರಪ್ಪ ಮರೆತಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ವಿಧಾನಸೌಧದ ಆವರಣದಲ್ಲಿ ಪಕ್ಷದ ಶಾಸಕರಿಗೂ ಪ್ರತಿಭಟನೆ ನಡೆಸಲು ಬಿಡದೆ, ಹಿರಿಯ ಶಾಸಕರು ಎನ್ನುವ ಗೌರವ ಕೂಡ ನೀಡದೆ ಅನಾಗರೀಕವಾಗಿ ನಡೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಅವರನ್ನು ರಾಜ್ಯದ ಜನತೆ ಯಾವುದರಿಂದ ಹೊಡೀಬೇಕು ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳಲಾಗಿತ್ತು. ಆದರೆ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಈ ಶಿಸ್ತನ್ನು ಗಾಳಿಗೆ ತೂರಿದ್ದಾರೆ. ಯಾವುದೆ ಯೋಜನೆ ರೂಪಿಸದೆ ಕೇಂದ್ರ ಸರಕಾರದ ಯೋಜನೆಗಳನ್ನೆ ಯಡಿಯೂರಪ್ಪ ಎಂದು ಅವರು ಟೀಕಿಸಿದರು.

ಶೀಘ್ರದಲ್ಲೆ ಆರೋಪ ಪಟ್ಟಿ ಬಿಡುಗಡೆ: ರಾಜ್ಯ ಬಿಜೆಪಿ ಸರಕಾರದ ವೈಫಲ್ಯಗಳು, ಮಿತಿಮೀರಿದ ಹಗರಣಗಳು, ಅಧಿಕಾರ ದುರುಪಯೋಗ, ಭಷ್ಟಾಚಾರದಲ್ಲಿ ಭಾಗಿಯಾಗಿರುವುದು ಮುಂತಾದ ಆರೋಪಗಳನ್ನು ಒಳಗೊಂಡ ಪಟ್ಟಿಯನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

Share: