ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತೆ ಕಾಂಗ್ರೆಸ್‌ಗೆ

ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತೆ ಕಾಂಗ್ರೆಸ್‌ಗೆ

Sat, 20 Apr 2024 04:01:35  Office Staff   SO News

ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಶುಕ್ರವಾರ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶಾರದಾ ಶೆಟ್ಟಿಯವರು ಪಕ್ಷ ಸೇರ್ಪಡೆಯಾದರು. ಸಿಎಂ ಹಾಗೂ ಡಿಸಿಎಂ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ಬಾವುಟ ನೀಡಿ ಸ್ವಾಗತಿಸಿಕೊಂಡರು.

ವಿಧಾನಸಭಾ ಚುನಾವಣೆಯ ಬಳಿಕ ಪಕ್ಷದಿಂದ ದೂರವುಳಿದಿದ್ದ ಅವರು, ಇದೀಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಪರವಾಗಿ ಚಟುವಟಿಕೆಗಳನ್ನ ನಡೆಸಲು ಸಕ್ರಿಯರಾಗಲಿದ್ದಾರೆ. 'ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಲ್ಲರೂ ಒಗ್ಗೂಡಿ ಚುನಾವಣೆಯನ್ನ ಎದುರಿಸೋಣ. ಆ ಮೂಲಕ ಪಕ್ಷಕ್ಕಾಗಿ ದುಡಿದು, ಪಕ್ಷದ ಗೆಲುವಿಗೆ ಶ್ರಮಿಸೋಣ' ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಪರ ಕರೆ ನೀಡಿದ್ದಾರೆ.


Share: