ಭಟ್ಕಳ, ಅಕ್ಟೋಬರ್ ೨೬: ಚಿರತೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ಇಲ್ಲಿಯ ವೈಭವ ಲಾಡ್ಜ ಬಳಿ ಬಂಧಿಸಿದ್ದಾರೆ.
ಆರೋಪಿಗಳನ್ನು ಮಾದೇವ ನಾಯ್ಕ ಅಬ್ರೆ, ಅಣ್ಣಪ್ಪ ಶಿರಾಲಿ ಹಾಗೂ ಪ್ರದೀಪ ಶೆಟ್ಟಿ ಹೊನ್ನಾವರ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ಚಿರತೆಯ ಚರ್ಮದ ಮೌಲ್ಯ ೫೦,೦೦೦ರೂಪಾಯಿ ಎಂದು ಅಂದಾಜಿಸಲಾಗಿದೆ. ಡಿವಾಯ್‌ಎಸ್ಪಿ ವೇದಮೂರ್ತಿ, ಸಿಪಿಐ ಗುರುಮತ್ತೂರು ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.