ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಜ್ಯದಲ್ಲಿ ಹೊಸತಾಗಿ ಹನ್ನೊಂದು ಪ್ಯಾರಾಮೆಡಿಕಲ್ ಕಾಲೇಜುಗಳು ಮತ್ತು ಎಂಟು ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ

ಬೆಂಗಳೂರು: ರಾಜ್ಯದಲ್ಲಿ ಹೊಸತಾಗಿ ಹನ್ನೊಂದು ಪ್ಯಾರಾಮೆಡಿಕಲ್ ಕಾಲೇಜುಗಳು ಮತ್ತು ಎಂಟು ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ

Sat, 01 May 2010 02:58:00  Office Staff   S.O. News Service

ಬೆಂಗಳೂರು,ಏಪ್ರಿಲ್,೩೦-ರಾಜ್ಯದಲ್ಲಿ ಹೊಸತಾಗಿ ಹನ್ನೊಂದು ಪ್ಯಾರಾಮೆಡಿಕಲ್ ಕಾಲೇಜುಗಳು ಮತ್ತು ಎಂಟು ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.

ಗೃಹ ಸಚಿವ ಡಾ||ವಿ.ಎಸ್.ಆಚಾರ್ಯ ಅವರ ನೇತೃತ್ವದ ಸಂಪುಟ ಉಪಸಮಿತಿ ಸಭೆಯಲ್ಲಿ ಇಂದು ಈ ಕುರಿತು ಚರ್ಚೆ ನಡೆದು ಅಂತಿಮವಾಗಿ ಹೊಸ ಕಾಲೇಜುಗಳ ಪ್ರಾರಂಭಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.

ಶಿವಮೊಗ್ಗ,ಬಿಜಾಪುರ,ಗದಗ,ಬಾದಾಮಿ,ಯಾದಗಿರಿ,ದಾವಣಗೆರೆ,ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಒಟ್ಟು ಹನ್ನೊಂದು ಕಡೆ ಪ್ಯಾರಾ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಲು ಸಂಪುಟ ಉಪಸಮಿತಿ ಅನುಮತಿ ನೀಡಿದೆ.

ಹನ್ನೊಂದು ಪ್ಯಾರಾ ಮೆಡಿಕಲ್ ಕಾಲೇಜುಗಳಲ್ಲಿ ಹದಿನಾರು ಹೊಸ ಕೋರ್ಸುಗಳಿಗೆ ಅನುಮತಿ ನೀಡಲಾಗಿದ್ದು ಒಟ್ಟು ೩೨೦ ಮಂದಿ ವ್ಯಾಸಾಂಗ ಮಾಡಲು ಅವಕಾಶ ನೀಡಲಾಗಿದೆ.

ಲ್ಯಾಬ್ ಟೆಕ್ನಾಲಜಿ ಸೇರಿದಂತೆ ಒಟ್ಟು ಹದಿನಾರು ಕೋರ್ಸುಗಳನ್ನು ಈ ಕಾಲೇಜುಗಳಿಗೆ ನೀಡಿರುವುದರಿಂದ ಈ ಸಂಬಂಧ ಇದ್ದ ಕೊರತೆ ನಿವಾರಣೆಯಾದಂತಾಗಿದೆ.

ಇನ್ನು ದಾವಣಗೆರೆ,ಕೋಲಾರ,ಚಿತ್ರದುರ್ಗ,ಬಿಜಾಪುರ,ಉಡುಪಿಯ ಕೋಟಾ ಹಾಗೂ ಕಾಪು ಸೇರಿದಂತೆ ಎಂಟು ಕಡೆ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಬಿಸಲು ಸಂಪುಟ ಉಪಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.


Share: