ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಆರೋಗ್ಯ ಕಾಪಾಡಲು ಸಂಸ್ಕರಿಸಿದ ಹಣ್ಣು ಮತ್ತು ತರಕಾರಿ ವಿತರಣೆ

ಬೆಂಗಳೂರು:ಆರೋಗ್ಯ ಕಾಪಾಡಲು ಸಂಸ್ಕರಿಸಿದ ಹಣ್ಣು ಮತ್ತು ತರಕಾರಿ ವಿತರಣೆ

Tue, 23 Feb 2010 03:13:00  Office Staff   S.O. News Service

ಬೆಂಗಳೂರು, ಫೆಬ್ರವರಿ 22:ರಾಜ್ಯದ ಹಣ್ಣು ಮತ್ತು ತರಕಾರಿಗಳನ್ನು ಸಂಸ್ಕರಣೆಮಾಡಿ ಎಲ್ಲ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ನೀಡುವುದರ ಮೂಲಕ ಎಲ್ಲರಲ್ಲಿ ಆರೋಗ್ಯವನ್ನು ಕಾಪಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯ ಸರ್ಕಾರ ಹಾಗೂ ಅಮೇರಿಕಾದ ಟೆಕ್ಸಾಸ್ ಎ. ಮತ್ತು ಎಂ. ವಿಶ್ವವಿದ್ಯಾಲಯ ಇಂದು ಒಡಂಬಡಿಕೆಗೆ ಸಹಿಹಾಕಿತು.

 

 

ರಾಜ್ಯ ಸರ್ಕಾರದ ಪರವಾಗಿ ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವ ವಿದ್ಯಾಲಯ ಹಾಗು ಟೆಕ್ಸಾಸ್ ವಿಶ್ವ ವಿದ್ಯಾಲಯದ ಪರವಾಗಿ ಡಾ. ರೋಲ್ಸ್ ಸಹಿಹಾಕಿದರು. ರಾಜ್ಯದಲ್ಲಿ ಬೆಳೆಯುವ ತೋಟಗಾರಿಕೆ ಉತ್ಪನ್ನಗಳು ಹಾಗೂ ಹಣ್ಣುಗಳನ್ನು ಗುಣಾತ್ಮಕವಾಗಿ ಕಾಪಾಡಿ ಮಕ್ಕಳ ಆರೋಗ್ಯಕ್ಕೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಟೆಕ್ಸಾಸ್ ವಿಶ್ವ ವಿದ್ಯಾಲಯ ಸಂಶೋದನೆ ಮಾಡಿರುವುದರಿಂದ ಇದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ ಎಂದು ತೋಟಗಾರಿಕೆ ಸಚಿವ ಉಮೇಶ್ ಕತ್ತಿ ತಿಳಿಸಿದರು.

 

 

ದೇಶಿಯ ತಳಿಗಳನ್ನು ಉಪಯೋಗಿಸಿ ಉತೃಷ್ಟವಾದ ಹಣ್ಣು ಮತ್ತು ತರಕಾರಿಗಳ ಹೊಸ ಹೊಸ ತಳಿಗಳನ್ನು ಕಂಡು ಹಿಡಿಯುವುದು ದೇಶಿಯ ಹೊಸ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಉತ್ಪಾದನೆಮಾಡಲು ಹೊಸ ಹೊಸ ತಂತ್ರಜ್ಞಾನಗಳನ್ನು ರೂಪಿಸಿ ರೈತರಿಗೆ ಪ್ರಯೋಗ ಮಾಡುವಂತೆ ಸಂಸ್ಥೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

 

ಹಣ್ಣು ಮತ್ತು ತರಕಾರಿಗಳ ಕೊಯಿಲುಗಳ ನಂತರ ನಷ್ಟವನ್ನು ಕಡಿಮೆಗೊಳಿಸುವುದು ಹಾಗೂ ಗುಣ ಮಟ್ಟವನ್ನು ಹೆಚ್ಚಿಸುವುದು ಪರಿಷ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧಿತ ವಸ್ತುಗಳ ಅಭಿವೃದ್ಧಿಗೆ ಸಂಶೋಧನೆ ಕೈಗೊಳ್ಳಲಾಗುದು ಎಂದರು.

 

 

ಕರ್ನಾಟಕ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯ ಶೈಕ್ಷಣಿಕ ಸಂಬಂಧವನ್ನು ವೃದ್ಧಿಸಿ ವಿದ್ಯಾರ್ಧಿಗಳು ಹಾಗೂ ವಿಜ್ಞಾನಿಗಳು ಹಾಗೂ ರೈತರ ಪರಸ್ವರ ಅಧ್ಯಯನ ಪ್ರವಾಸ ಕೈಗೊಂಡು ಜ್ಞಾನ ಮತ್ತು ಕೌಶಲ್ಯ ವಿನಿಮಯ ಮಾಡಿಕೊಳ್ಳುವುದು ಉದ್ದೇಶವಾಗಿದೆ.

 

 

ಹಣ್ಣು ತರಕಾರಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ಮಾಡಿ ಹೊರ ದೇಶಗಳಿಗೆ ರಫ್ತುಮಾಡಲು ಅವಕಾಶ ಕಲ್ಪಸಿ ರೈತರ ಆದಾಯವನ್ನು ಹೆಚ್ಚಿಸುವುದು ಟೆಕ್ಸಾಸ್ ವಿಶ್ವವಿದ್ಯಾಲಯದ ಮೂಲ ಉದ್ದೇಶವಾಗಿದ್ದು, ಬಾಗಲಕೋಟೆಯಲ್ಲಿ ಸಂಶೋದನೆ ನಡೆಸಲು ಅವಕಾಶ ನೀಡಲಾಗುವುದು ಎಂದರು.

 

 

ಎ ಮತ್ತು ಎಂ ವಿಶ್ವವಿದ್ಯಾಲಯ ಅವರ ಸಹಾಯದಿಂದ ರಾಜ್ಯದಲ್ಲಿ ಹಣ್ಣು ಮತ್ತು ತರಕಾರಿ ಪ್ರಾಧಾನ್ಯ ಕೇಂದ್ರ ಎಂದು ಹೆಸರಿಡಲಾಗಿದ್ದು, ಎಲ್ಲ ಮಕ್ಕಳ ಕೊರತೆ ಆಹಾರ ಪೋಷಕಾಂಶ ನ್ಯೂನತೆಯನ್ನು ಬಗೆಹರಿಸಿ ಉತ್ತಮ ಆರೋಗ್ಯ ಸಮಾಜ ನಿರ್ಮಾಣಮಾಡುವುದು ಸಂಸ್ಥೆಯ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

 

 

ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗಳು ಎರಡೂ ದೇಶಗಳ ಹಣ್ಣು ಮತ್ತು ತರಕಾರಿ ಸಂಸ್ಕರಣೆ, ಸಂಶೋಧನೆಗೆ ಪ್ರಾಧಾನ್ಯ ದೊರೆಯಲಿದೆ.


Share: