ಮಂಗಳೂರು, ಅ.25: ಮಂಗಳೂರಿನಿಂದ ಈ ಬಾರಿ ನೇರವಾಗಿ ಹಜ್ಜ್ ಯಾತ್ರೆ ಕೈಗೊಳ್ಳುವ ಅವಕಾಶ ಸಿಕ್ಕಿರುವುದು ಯಾತ್ರಾರ್ಥಿಗಳಿಗೆ ಸಂತಸವನ್ನುಂಟು ಮಾಡಿತ್ತು. ಈ ಸಂಭ್ರಮ ರವಿವಾರ ಹಜ್ಜ್ ಯಾತ್ರೆಯ ಪ್ರಥಮ ತಂಡದ ಬೀಳ್ಕೊಡುಗೆ ಸಮಾರಂಭ ದಲ್ಲಿ ಕಂಡು ಬಂತು.
ಮಂಗಳೂರಿನಿಂದ ಈ ಬಾರಿ ೭೦೦ ಮಂದಿ ಯಾತ್ರಾರ್ಥಿಗಳು ಹಜ್ಜ್ ಯಾತ್ರೆಗೆ ನೋಂದಾಯಿಸಿದ್ದರು. ಅವರಿಗಾಗಿ ಬಜಪೆಯಲ್ಲಿ ಹಜ್ಜ್ ಕ್ಯಾಂಪನ್ನು ಆರಂಭಿಸಲಾಗಿದೆ. ಅಲ್ಲಿ ಎಲ್ಲರಿಗೆ ಉಳಿದುಕೊಳ್ಳುವ ಅವಕಾಶ ಇಲ್ಲದಿದ್ದರೂ ಸ್ಥಳೀಯ ನಿವಾಸಿಗಳ ಸಹಕಾರದಿಂದ ಹಜ್ಜ್ ಯಾತ್ರಿಗಳನ್ನು ಮನೆಯಲ್ಲಿ ಅತಿಥಿಗಳಾಗಿ ಸ್ವೀಕರಿಸಿ ಇಂದು ಬೀಳ್ಕೊಟ್ಟಾಗ ಆತ್ಮೀಯತೆಯ ಭಾವನೆಗಳು
ಎದ್ದು ಕಾಣುತ್ತಿತ್ತು. ಹಜ್ಜ್‌ಯಾತ್ರಿಗಳನ್ನು ಬಜಪೆ ಪರಿಸರದ ಸ್ಥಳೀಯರು ತಮ್ಮ ಮನೆಯಲ್ಲಿಅತಿಥಿಗಳಾಗಿ ಸ್ವೀಕರಿಸಿ ಬೀಳ್ಕೊಟ್ಟ ಮಾದರಿಯನ್ನು ಮಾಜಿ ಶಿಕ್ಷಣ ಸಚಿವ ಬಿ.ಎ. ಮೊದಿನ್ ತಮ್ಮ ಸ್ವಾಗತ ಭಾಷಣದಲ್ಲಿ ಮುಕ್ತ ಕಂಠದಿಂದಶ್ಲಾಸಿದರು.
ಮಂಗಳೂರಿನಲ್ಲಿ ನಮಗೆ ಹಜ್ಜ್ ಯಾತ್ರೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟ ಎಲ್ಲರಿಗೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಕಡಬದ ಹಜ್ಜ್ ಯಾತ್ರಿ ಅಬ್ದುಲ್ ಖಾದರ್, ನಮಗೆ ಇಲ್ಲಿನ ಸ್ಥಳೀಯರು ಒಳ್ಳೆಯ ಆತಿಥ್ಯ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು. ಮಂಗಳೂರಿನಿಂದ ಹಜ್ಜ್ ಯಾತ್ರೆಗೆ ಹೋಗುವ ಭಾಗ್ಯ ದೊರೆತಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ೭೪ರ ಹರೆಯದ ಹಜ್ಜ್ ಯಾತ್ರಿ ಖತೀಜಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
“ಪತ್ರಿಕೆ ನೋಡಿ ಹಜ್ಜ್ ಯಾತ್ರೆಗೆ ಅರ್ಜಿ ಸಲ್ಲಿಸಿದೆ. ಮಂಗಳೂರಿನಿಂದ ಹೋಗುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಹಜ್ಜ್ ಯಾತ್ರೆ ಪುಣ್ಯ ಕಾರ್ಯ. ತನ್ನ ಬಹಳ ಹಿಂದಿನ ಆಸೆ ನೆರವೇರಿತು" ಎಂದು ಹಜ್ಜ್ ಯಾತ್ರಿ ಅಬ್ದುಲ್ ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಳಿ ಬಟ್ಟೆ ಧರಿಸಿದ ಹಜ್ಜ್ ಯಾತ್ರಿಗಳಿಗೆ ಹೆಗಲಿಗೆ ಬಿಳಿ ಚೀಲ, ಗುರುತುಪತ್ರ ಇನ್ನಿತದ ದಾಖಲೆಗಳು, ಕೆಂಪು ರಿಬ್ಬನ್ ದಾರ, ಬಿಳಿ ಬಟ್ಟೆ, ಹಳದಿ ಸ್ಕಾರ್ಫ್ ಧರಿಸಿದ ಯಾತ್ರಿಗಳನ್ನು ಹಜ್ಜ್ ಯಾತ್ರೆಯ ಕ್ಯಾಂಪ್‌ನಿಂದ ಬಸ್ ಮೂಲಕ ಬಜಪೆ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ವಿಮಾನ ಮೂಲಕ ಹಜ್ಜ್ಯಾ ತ್ರಿಗಳ ಪ್ರಥಮ ತಂಡ ಮಂಗಳೂರಿನಿಂದ ಹೊರಟಾಗ ನೆರೆದಿದ್ದ ಸ್ಥಳೀಯರು, ಕುಟುಂಬಸ್ಥರು, ಸ್ನೇಹಿತರು ಆತ್ಮೀಯವಾಗಿ ಬೀಳ್ಕೊಟ್ಟರು.
ರಾಜ್ಯಕ್ಕೆ ಹಜ್ಜ್ ಕೋಟಾ ಹೆಚ್ಚಿಸಲು ಮುಮ್ತಾಝ್ ಅಲಿ ಖಾನ್ ಆಗ್ರಹ : ಬೆಂಗಳೂರಿನಲ್ಲಿ ಹಜ್ಜ್ ಯಾತ್ರಿಗಳಿಗೆ ‘ಹಜ್ಜ್ ಘರ್’ ನಿರ್ಮಿಸಲು ಈಗಾಗಲೇ ಒಂದು ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಅದೇ ರೀತಿ ಮಂಗಳೂರಿನಲ್ಲೂ ಹಜ್ಜ್ ಯಾತ್ರಿಗಳಿಗೆ ಶಾಶ್ವತವಾದ ಹಜ್ಜ್ ಯಾತ್ರಿಗಳ ನಿವಾಸ (ಹಜ್ಜ್ ಘರ್) ನಿರ್ಮಿಸಲು ಕೇಂದ್ರ ಸರಕಾರ, ಸ್ಥಳೀಯ ದಾನಿಗಳು ಮುಂದೆ ಬರಬೇಕು ಎಂದು ರಾಜ್ಯ ವಕ್ ಸಚಿವ ಡಾ. ಮುಮ್ತಾಜ್ ಅಲಿಖಾನ್ ಹಜ್ಜ್ ಯಾತ್ರಿಗಳನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ರವಿವಾರ ಅಭಿಪ್ರಾಯಪಟ್ಟರು. ರಾಜ್ಯಕ್ಕೆ ಹಜ್ಜ್ ಯಾತ್ರಾರ್ಥಿಗಳ ಕೋಟಾ ಹೆಚ್ಚಿಸಬೇಕು, ವಿಐಪಿ ಕೋಟಾ ನಿಲ್ಲಿಸಬೇಕು, ಖಾಸಗಿ ಹಜ್ಜ್ ಯಾತ್ರೆಯ ವ್ಯವಸ್ಥೆ ಮಾಡುವವರಿಂದ ಆಗುವ
ತೊಂದರೆ ತಪ್ಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಡಾ. ಮುಮ್ತಾಜ್ ಅಲಿ ಖಾನ್ ತಿಳಿಸಿದರು.
ಕುದ್ರೋಳಿಯಿಂದ ೨ ಲಕ್ಷ ರೂ. ಘೋಷಣೆ: ಮಂಗಳೂರಿನಲ್ಲಿ ಹಜ್ಜ್ ಭವನ ನಿರ್ಮಿಸುವುದಾದಲ್ಲಿ ಕುದ್ರೋಳಿ ಶ್ರೀ ಕರ್ಣನಾಥ ದೇವಸ್ಥಾನದ ವತಿಯಿಂದ ಎರಡು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪ್ರಜಾರಿ ಘೋಷಿಸಿದರಲ್ಲದೆ, ಹಜ್ಜ್ ಯಾತ್ರಿಗಳಿಗೆ ಈ ಸಂದರ್ಭದಲ್ಲಿ ಶುಭ
ಕೋರಿದರು.
ಹಜ್ ಯಾತ್ರೆಗೆ ಇಂದು ಎರಡನೆಯ ತಂಡ: ಹಜ್ಜ್ ಯಾತ್ರಾರ್ಥಿಗಳ ಎರಡನೆ ತಂಡವು (೧೧೨ ಮಂದಿ ) ಮಂಗಳ್ರರು ವಿಮಾನ ನಿಲ್ದಾಣದಿಂದ ಅ.೨೬ರ ಅಪ್ರಾಹ್ನ ಹೊರಡಲಿದೆ. ಈ ತಂಡ ಅ.೨೪ರಂದು ಬಜ್ಪೆಯಲ್ಲಿರುವ ಹಜ್ಜ್ ಕ್ಯಾಂಪಿನಲ್ಲಿ ನೋಂದಣಿ ಮಾಡಿಸಿಕೊಂಡಿವೆ. ಎರಡನೆ ತಂಡದಲ್ಲಿ ೬೦ ಪುರುಷರು ಮತ್ತು ೫೨ ಮಹಿಳಾ ಯಾತ್ರಾರ್ಥಿಗಳಿದ್ದಾರೆ. ಅ.೨೭ರಂದು ಹೊರಡಲಿರುವ ಮೂರನೆ ತಂಡ ಅ.೨೫ರಂದು ನೋಂದಣಿ ಮಾಡಿಸಿದೆ. ಇದರೊಂದಿಗೆ ರವಿವಾರ ಸಂಜೆಯವರೆಗೆ ನೋಂದಣಿ ಮಾಡಿಸಿ ಕೊಂಡವರ ಸಂಖ್ಯೆ ೩೩೬ ಆಗಿದೆ. ರವಿವಾರ ಮಧ್ಯಾಹ್ನ ೧೨:೨೦ಕ್ಕೆ ಹೊರಟ ಹಜ್ಜ್ ಯಾತ್ರಾರ್ಥಿಗಳ ಮೊದಲ ತಂಡವು ಮಧ್ಯಾಹ್ನ ೧:೧೦ಕ್ಕೆ ಕಲ್ಲಿಕೋಟೆ ತಲುಪಿದೆ. ಅಲ್ಲಿಂದ ಅಪ್ರಾಹ್ನ ೩:೩೦ಕ್ಕೆ ಮತ್ತೊಂದು ವಿಮಾನದ ಮೂಲಕ ಜಿದ್ದಾಕ್ಕೆ ಪ್ರಯಾಣ ಬೆಳೆಸಿತು ಎಂದು
ಮೂಲಗಳು ತಿಳಿಸಿವೆ.